ಮೈಸೂರು ಹೀಲಿಯಂ ಗ್ಯಾಸ್ ದುರಂತ : ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಿಷ್ಟು..

ಮೈಸೂರು,ಡಿಸೆಂಬರ್,26,2025 (www.justkannada.in):  ಮೈಸೂರು ಅರಮನೆ ಬಳಿ ಸಂಭವಿಸಿದ ಹೀಲಿಯಂ ಗ್ಯಾಸ್ ಸ್ಪೋಟ ಪ್ರಕರಣ ಸಂಬಂಧ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಮೈಸೂರಿನಲ್ಲಿ ಹೀಲಿಯಂ ಸಿಲಿಂಡರ್ ಸ್ಪೋಟದಿಂದ ಓರ್ವ ಸಾವನ್ನಪ್ಪಿದ್ದಾನೆ.  ಯಾವ ರೀತಿ ಘಟನೆ ಆಗಿದೆ. ಸಿಲಿಂಡರ್ ಎಲ್ಲಿ ಹೇಗೆ ಸಿಕ್ಕಿತು ಅಂತಾ ತನಿಖೆ ಮಾಡಲು ಸೂಚಿಸಿದ್ದೇನೆ. ನಾನು ಮೈಸೂರಿಗೆ ಹೋದಾಗ ಸಭೆ ಮಾಡಿ ಮಾಹಿತಿ ನೀಡುತ್ತೇನೆ ಎಂದರು.

ಅರಮನೆ ಬಳೀ ವಸ್ತುಗಳನ್ನ ಮಾರಾಟ ಮಾಡುವವರಿಗೆ ನಿರ್ಬಂಧ ಇರಲಿಲ್ಲ. ಈ ಬಗ್ಗೆ ನಿಗಾ ವಹಿಸುವಂತೆ ಪೊಲೀಸರಿಗೆ ಸೂಚಿಸಿದ್ದೇನೆ.  ಹೆಚ್ಚಿನ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದ್ದೇನೆ ಎಂದು ಪರಮೇಶ್ವರ್ ಹೇಳಿದರು.

Key words: Mysore, helium, gas, tragedy, Home Minister, Dr. G. Parameshwar