ಬೆಂಗಳೂರು,ಡಿಸೆಂಬರ್,25,2025 (www.justkannada.in): ಬಿಜೆಪಿ ವಿರುದ್ದ ಮತಗಳ್ಳತನ ಮಾಡಿದ್ದ ಕಾಂಗ್ರೆಸ್ ವಿರುದ್ದವೇ ಇದೀಗ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವೋಟ್ ಚೋರಿ ಆರೋಪ ಮಾಡಿದ್ದಾರೆ.
ಹೌದು, ಕಾಂಗ್ರೆಸ್ 10 ರಿಂದ 15 ಸಾವಿರ ಕಳ್ಳ ಮತದಾರರನ್ನ ಸೇರಿಸಿದ್ದಾರೆ. ಬೆಂಗಳೂರು ಎಲ್ಲಾ ಕ್ಷೇತ್ರಗಳಲ್ಲೂ ಕಳ್ಳ ಮತದಾರರನ್ನ ಸೇರಿಸಿದ್ದಾರೆ ಎಂದು ಬಿವೈ ವಿಜಯೇಂದ್ರ ಆರೋಪಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಬಿವೈ ವಿಜಯೇಂದ್ರ, ಈ ಸರ್ಕಾರದ ಮೇಲೆ ಜನ ಶಾಪ ಹಾಕುತ್ತಿದ್ದಾರೆ. ಮುಂದೆ ಬಿಜೆಪಿ ಸ್ವಂತ ಶಕ್ತಿ ಮೇಲೆ ಗೆದ್ದು ಅಧಿಕಾರ ಹಿಡಿಯಲಿದೆ ಕಾಂಗ್ರೆಸ್ ನವರು ವೋಟ್ ಚೋರಿ ಆರೋಪ ಮಾಡುವ ಮೂಲಕ ಬಿಜೆಪಿಗೆ ಕಳಂಕ ಹಚ್ಚುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಮೋದಿ ಅವರ ಸರ್ಕಾರ ಭ್ರಷ್ಟಾಚಾರ ರಹಿತ ಸರ್ಕಾರ ದೇಶದಲ್ಲಿರುವ ಯಾವುದೇ ವಿರೋಧ ಪಕ್ಷಗಳು ಕೂಡ ನಮ್ಮ ಸರ್ಕಾರದ ಬಗ್ಗೆ ಭ್ರಷ್ಟಾಚಾರದ ಬಗ್ಗೆ ಆರೋಪ ಮಾಡಲು ಸಾಧ್ಯವಿಲ್ಲ. ಯಾಕೆ ಅಂದರೆ ಮೋದಿಗೆ ವಾಜಪೇಯಿಯವರು ಪ್ರೇರಣೆಯಾಗಿದ್ದಾರೆ ಎಂದು ಬಿವೈ ವಿಜಯೇಂದ್ರ ತಿಳಿಸಿದರು.
Key words: Congress, 10 to 15 thousand, fraudulent voters, BY Vijayendra







