ದಾವಣಗೆರೆ,ಡಿಸೆಂಬರ್,25,2025 (www.justkannada.in): ಗೃಹಲಕ್ಷ್ಮೀ ಯೋಜನೆಯ 5 ಸಾವಿರ ಕೋಟಿ ಹಣ ಎಲ್ಲಿಗೆ ಹೋಗಿದೆ ಎಂದು ಸಿಎಂ ಸಿದ್ದರಾಮಯ್ಯಗೆ ಗೊತ್ತಿಲ್ಲ. ಆರ್ಥಿಕ ತಜ್ಞ ಸಿಎಂ ಸಿದ್ದರಾಮಯ್ಯಗೆ ನಾಚಿಕೆಯಾಗಬೇಕು ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ, ನಮ್ಮ ಸಿಎಂ ವಿಶ್ವದಲ್ಲೇ ಅತ್ಯಂತ ಬುದ್ದಿವಂತರು, ತಜ್ಞರು. ಅಮೇರಿಕಾ ಅಧ್ಯಕ್ಷ ಟ್ರಂಪ್ ಗೆ ಯಾವ ರೀತಿ ತೆರಿಗೆ ಹಾಕಬಹುದು ಎಂಬುದನ್ನ ಸಲಹೆ ನೀಡಲು ಸಿದ್ದರಾಮಯ್ಯ ಸೂಕ್ತ ವ್ಯಕ್ತಿ ಅಂತಾ ಈಗಾಗಲೇ ಹೇಳಿದ್ದೇನೆ ಎಂದು ಕುಹಕವಾಡಿದರು.
ಈಗ ಹೊಸ ವರ್ಷಕ್ಕೆ ಬಾರ್ ಒಪನ್ ಗೆ ರೇಟ್ ಫಿಕ್ಸ್ ಮಾಡಿದ್ದಾರೆ. ಬಾರ್ ಓಪನ್ ಗೆ 95 ಲಕ್ಷದಿಂದ 1 ಕೋಟಿ ರೇಟ್ ಫಿಕ್ಸ್ ಮಾಡಿದ್ದಾರೆ ಈ ಸರ್ಕಾರದ ಹೊಸ ವರ್ಷದ ಕೊಡುಗೆ ಇದು. ಇದೊಂದು ರೀತಿಯಲ್ಲಿ ಸರ್ಕಾರ ಲೂಟಿ ಮಾಡಲು ಮುಂದಾಗಿದೆ. ಈ ಸರ್ಕಾರ ಯಾವ ಇಲಾಖೆಯನ್ನು ಬಿಟ್ಟಿದೆ. ಎಸ್ಸಿಎಸ್ ಪಿ, ಟಿಎಸ್ ಪಿ ಹಣ ಅಷ್ಟೇ ಅಲ್ಲ ಎಲ್ಲಾ ಇಲಾಖೆಯಗಳಲ್ಲೂ ಲೂಟಿ ಮಾಡಿದ್ದಾರೆ. ಐದು ಗ್ಯಾರಂಟಿ ಅಂತಾ ತಂದಿದ್ದಾರೆ. ಗೃಹಲಕ್ಷ್ಮೀ ಯೋಜನೆಯ 5 ಸಾವಿರ ಕೋಟಿ ಹಣ ಎಲ್ಲಿ ಹೋಗಿದೆ ಎಂದು ಸಿಎಂಗೆ ಗೊತ್ತಿಲ್ಲ. ಆರ್ಥಿಕ ತಜ್ಞ ಸಿದ್ದರಾಮಯ್ಯ ಗೊತ್ತಿಲ್ಲ ನಾಚಿಕೆಯಾಗಬೇಕು ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಟೀಕಿಸಿದರು.
Key words: Rs 5,000 crore, Economic expert, CM, Siddaramaiah, ashamed, HDK







