ಸಿಎಂ ಬದಲಾವಣೆ ಬಗ್ಗೆ ಯಾವುದೇ ಊಹಾಪೋಹಗಳಿಲ್ಲ- ಡಿಸಿಎಂ ಡಿಕೆ ಶಿವಕುಮಾರ್

ನವದೆಹಲಿ,ಡಿಸೆಂಬರ್,24,2025 (www.justkannada.in):  ರಾಜ್ಯ ಕಾಂಗ್ರೆಸ್, ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ಸಿಎಂ ಬದಲಾವಣೆ ಬಗ್ಗೆ ಯಾವುದೇ ಊಹಾಪೋಹಗಳಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಬ್ರೇಕ್ ಪಾಸ್ಟ್ ಮೀಟಿಂಗ್ ಬಹಳ ಸಾಮಾನ್ಯ ಪ್ರಕ್ರಿಯೆ.  ಎಲ್ಲರ ಜೊತೆಗೂ ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡುತ್ತೇವೆ ಶೇರಿಂಗ್ ಕೇರಿಂಗ್ ಬಹಳ ಮುಖ್ಯ ಎಂದರು.

ಮೈಸೂರಿನಲ್ಲಿ ಅಹಿಂದ ಸಮಾಬಶಕ್ಕೆ ಸಿದ್ದತೆ ವಿಚಾರವಾಗಿ ಪ್ರತಿಕ್ರಿಯಿಸಿದ ಡಿಸಿಎಂ ಡಿಕೆ ಶಿವಕುಮಾರ್  ಅವರಿಗೆ ಒಳ್ಳೆಯದಾಗಿಲಿ ಎಂದರು.

ಕೇಂದ್ರ ಸಚಿವ ಮನೋಹರ್ ಲಾಲ್ ಖಟ್ಟರ್ ಭೇಟಿ ಮಾಡಿದ್ದೇನೆ. ಈ ವೇಳೆ ಬಿಎಂಆರ್ ಸಿಎಲ್ -2  ಬಗ್ಗೆ ಚರ್ಚೆ ಮಾಡಲಾಗಿದೆ.  2026ರ ಡಿಸೆಂಬರ್ ತಿಂಗಳೊಳಗೆ ಮುಗಿಸುತ್ತೇವೆ ಎಂದಿದ್ದೇನೆ. ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ  ತಗ್ಗಿಸಲು ಪ್ಲಾನ್ ಮಾಡಲಾಗಿದೆ. ಸದ್ಯದಲ್ಲೇ  ಒಂದುವರೆ ಕಿ. ಮೀಗೆ ಪ್ಲಾನ್ ಮಾಡಲಾಗಿದೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.

Key words: No speculations, CM, change, DCM, DK Shivakumar