ಬೆಂಗಳೂರು,ಡಿಸೆಂಬರ್,24,2025 (www.justkannada.in): ಬಿಪಿಎಲ್ ಕಾರ್ಡುದಾರರಿಗೆ ಜನವರಿ ಅಥವಾ ಫೆಬ್ರವರಿಯಲ್ಲಿ ಇಂದಿರಾ ಕಿಟ್ ವಿತರಣೆ ಮಾಡಲಾಗುತ್ತದೆ ಎಂದು ಆಹಾರ ಸಚಿವ ಕೆ.ಎಚ್ ಮುನಿಯಪ್ಪ ತಿಳಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಆಹಾರ ಇಲಾಖೆ ಸಚಿವ ಕೆ.ಎಚ್ ಮುನಿಯಪ್ಪ, ಅಕ್ಕಿ ಹೆಚ್ಚಾಯ್ತು ಎಂಬ ಭಾವನೆ ಇದೆ. ಹಾಗಾಗಿ ಇಂದಿರಾ ಕಿಟ್ ಅಂತಾ ಹೊಸ ಯೋಜನೆ ಜಾರಿ ಮಾಡುತ್ತೇವೆ. ಜನವರಿ ಫೆಬ್ರವರಿಯಲ್ಲಿ ಬೇಳೆ, ಸಕ್ಕರೆ, ಉಪ್ಪು ವಿತರಣೆ ಮಾಡುತ್ತೇವೆ ಎಂದರು.
ಅರ್ಹರ ಬಿಪಿಎಲ್ ಕಾರ್ಡ್ ರದ್ದು ವಿಚಾರ ಕುರಿತು ಪ್ರತಿಕ್ರಿಯಿಸಿದ ಕೆ.ಎಚ್ ಮುನಿಯಪ್ಪ, ಕಾರ್ಡ್ ರದ್ದಾಗಿದ್ದರೇ ತಕ್ಷಣವೇ ತಹಶೀಲ್ದಾರ್ ಗಳನ್ನ ಭೇಟಿ ಮಾಡಿ ಅರ್ಜಿ ಹಾಕಿದ್ರೆ 15 ದಿನಗಳೊಳಗೆ ಪಡಿತರ ಕಾರ್ಡ್ ವಿತರಣೆ ಮಾಡಲಾಗುತ್ತದೆ. ಆಸ್ತಿ ಇರವವರೂ ಬಿಪಿಎಲ್ ಕಾರ್ಡ್ ಹೊಂದಿರುವ ವಿಚಾರ, ಅದನ್ನೂ ಪತ್ತೆ ಹಚ್ಚುವ ಕೆಲಸ ಆಗುತ್ತಿದೆ ಎಂದರು.
ಹೊರ ರಾಜ್ಯಗಳಿಗೆ ಪಡಿತರ ಅಕ್ರಮ ಸಾಗಾಟ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಕೆ.ಎಚ್ ಮುನಿಯಪ್ಪ, ಈಗಾಗಲೇ ವಿವಿಧೆಡೆ 574 ಜನರನ್ನ ಅರೆಸ್ಟ್ ಮಾಡಿದ್ದೇವೆ. ಕಠಿಣ ಕ್ರಮ ತೆಗೆದುಕೊಂಡಿದ್ದೇವೆ. ಇನ್ಮುಂದೆ ಹಾಗೆ ನಡೆಯಲ್ಲ ಎಂದು ತಿಳಿಸಿದರು.
Key words: Indira kit, BPL card, holders, January, February, Minister, KH Muniyappa







