ಮೈಸೂರು,ಡಿಸೆಂಬರ್,23,2025 (www.justkannada.in): ಕ್ರೈಸ್ತ ಸಮುದಾಯದವರು 2 ಎಕರೆ ಭೂಮಿಯನ್ನು ಕೇಳಿದ್ದಾರೆ. ನಾನು ಅಧಿಕಾರಿಗಳಿಗೆ ಹೇಳಿ ಸರ್ಕಾರಿ ಜಾಗವನ್ನು ಗುರುತಿಸಲು ಸೂಚನೆ ನೀಡುತ್ತೇನೆ ಎಂದು ಹೆಚ್ ಡಿ ಕೋಟೆ ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.
ಹೆಚ್.ಡಿ ಕೋಟೆ ಮತ್ತು ಸರಗೂರು ತಾಲ್ಲೂಕುಗಳ ಕ್ರೈಸ್ತ ಮಹಾಸಭಾ ವತಿಯಿಂದ ಸೈಂಟ್ ಜೋಸೆಫ್ ಶಾಲೆಯ ಆವರಣದಲ್ಲಿ 2025 ನೇ ಕ್ರೈಸ್ತ ಜಯಂತಿ ಮಹೋತ್ಸವ ಆಚರಣೆ ಮಾಡಲಾಯಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಅನಿಲ್ ಚಿಕ್ಕಮಾದು ಮಾತಾನಾಡಿ, ಈ ಜಗತ್ತಿನಲ್ಲಿಯೇ ಶಾಂತಿ ಪ್ರೀತಿಯನ್ನ ಬಿತ್ತುತ್ತಿರುವ ಸಮಾಜ ಕ್ರೈಸ್ತ ಸಮಾಜ. ಈ ಸಮಾಜ ಕೇವಲ ಅವರಿಗಾಗಿ ಅಲ್ಲ ಈ ಜಗತ್ತಿನ ಎಲ್ಲಾ ಜಾತಿ ಜನಾಂಗ ಧರ್ಮದವರಿಗೂ ಪ್ರಾರ್ಥನೆ ಮೂಲಕ ಶಾಂತಿಯನ್ನು ಬಯಸುತ್ತಿದ್ದಾರೆ.
ಇದೇ ಮೊದಲ ಬಾರಿಗೆ ಕೋಟೆಯಲ್ಲಿ ಎಲ್ಲಾ ಕ್ರೈಸ್ತ ಸಮುದಾಯಗಳು ಒಟ್ಟಿಗೆ ಬಂದು ಒಂದೇ ವೇದಿಕೆಯಡಿ ಕಾರ್ಯಕ್ರಮ ಮಾಡುತ್ತಿರುವುದು ಸಂತೋಷದ ವಿಚಾರ. ಹಾಗೆಯೇ ಸಮುದಾಯದ ಮುಖಂಡರು 2 ಎಕರೆ ಭೂಮಿಯನ್ನು ಕೇಳಿದ್ದಾರೆ. ನಾನು ಅಧಿಕಾರಿಗಳಿಗೆ ಹೇಳಿ ಸರ್ಕಾರಿ ಜಾಗವನ್ನು ಗುರುತಿಸಲು ಸೂಚನೆ ನೀಡುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಯೇಸುವಿನ ಜನನ ಅವರ ಸಂದೇಶ ಅವರು ತೋರಿಸಿದ ಮಾರ್ಗಗಳ ಕುರಿತಾಗಿ ಕಿರುರೂಪಕ, ನಾಟಕ, ಹಾಡು ನೃತ್ಯಗಳ ಪ್ರದರ್ಶನ ಮಾಡಲಾಯಿತು.
ವರದಿ
ತಿಮ್ಮರಾಜು, ಹೆಚ್ ಡಿ ಕೋಟೆ
Key words: HD Kote, 2 acres, land, Christian community, MLA, promise







