ಬೆಂಗಳೂರು, ಡಿಸೆಂಬರ್ 23,2025 (www.justkannada.in): ಮಾಜಿ ಸಚಿವ ಕೆ.ಎನ್. ರಾಜಣ್ಣ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಮತ್ತೊಂದು ಪತ್ರ ಬರೆದಿದ್ದು, ವೋಟ್ ಚೋರಿ ಅಭಿಯಾನದ ಬಗ್ಗೆ ತಮ್ಮ ಹೇಳಿಕೆಯನ್ನು ಹೇಗೆ ತಪ್ಪಾಗಿ ಅರ್ಥೈಸಲಾಗಿದೆ ಎಂದು ಉಲ್ಲೇಖಿಸಿದ್ದಾರೆ.
ಈ ಸಂಬಂಧ ಪತ್ರ ಬರೆದಿರುವ ಮಾಜಿ ಸಚಿವ ಕೆ.ಎನ್ ರಾಜಣ್ಣ, ನನ್ನ ಮಾತುಗಳನ್ನು ತಪ್ಪಾಗಿ ಅರ್ಥೈಸಿ, ತಪ್ಪು ರೀತಿಯಲ್ಲಿ ನಿಮ್ಮ ಗಮನಕ್ಕೆ ತಂದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ವಿನಂತಿಸುತ್ತೇನೆ. ಈ ವಿಷಯಗಳ ಕುರಿತು ವಿವರವಾಗಿ ಚರ್ಚಿಸಲು, ಭೇಟಿಗೆ ಸಮಯ ನೀಡುವಂತೆಯೂ ಪತ್ರಮುಖೇನ ರಾಹುಲ್ ಗಾಂಧಿಗೆ ಅವರು ಮನವಿ ಮಾಡಿದ್ದಾರೆ.
ವೋಟ್ ಚೋರಿ ಕಾರ್ಯಕ್ರಮವನ್ನು ತಾನು ಹೃದಯಪೂರ್ವಕವಾಗಿ ಬೆಂಬಲಿಸಿದ್ದು,ಇಂತಹ ಮಹತ್ವದ ವಿಷಯಗಳನ್ನು ದೇಶದ ಮುಂದೆ ಇಡುವ ನಿಮ್ಮ ನಾಯಕತ್ವ ಮತ್ತು ಮುಂದಾಳತ್ವವನ್ನು ಆಳವಾಗಿ ಮೆಚ್ಚುತ್ತೇನೆ. ನಾನು ನೀಡಿದ್ದ ಹೇಳಿಕೆಯ ಉದ್ದೇಶ ಏನೆಂದರೆ, ಕೆಪಿಸಿಸಿ ನೇಮಕ ಮಾಡಿದ ಬಿಎಲ್ಎಗಳು ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಿಲ್ಲ. ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಮತ್ತು ಸಂಬಂಧಿಸಿದವರು ಈ ಲೋಪಗಳತ್ತ ಸೂಕ್ತ ಗಮನ ನೀಡಿದ್ದರೆ, ಅವುಗಳನ್ನು ತಪ್ಪಿಸಬಹುದಾಗಿತ್ತು. ಹಾಗಿದ್ದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವು ಇನ್ನೂ 8 ರಿಂದ 10 ಸ್ಥಾನಗಳನ್ನು ಹೆಚ್ಚಾಗಿ ಗೆಲ್ಲುವ ಸಾಧ್ಯತೆ ಇತ್ತು ಎಂದಿದ್ದಾರೆ ಎಂದು ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.
Key words: letter, former minister, K.N. Rajanna, Rahul Gandhi







