ಮೈಸೂರು,ಡಿಸೆಂಬರ್,22,2025 (www.justkannada.in): ಮೈಸೂರು ಜಿಲ್ಲೆಯ ಸರಗೂರು ತಾಲೂಕು ಕಚೇರಿಗೆ ಬಾಂಬ್ ಬೆದರಿಕೆಯ ಸಂದೇಶ ಬಂದಿದೆ.
ಸರೂರು ತಾಲ್ಲೂಕು ಕಚೇರಿಗೆ RDX ಬಾಂಬ್ ಸ್ಪೋಟಿಸೋದಾಗಿ ಇಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ಮಧ್ಯಾಹ್ನ 1 ಗಂಟೆಗೆ ಬಾಂಬ್ ಸ್ಪೋಟಗೊಳ್ಳುತ್ತೆ ಎಂದು ಸಂದೇಶ ಬಂದಿದೆ.
ಇ- ಮೇಲ್ ನೋಡಿ ಅಧಿಕಾರಿಗಳು ಹಾಗೂ ಸಾರ್ವಜನಿಕರು ಆತಂಕಗೊಂಡಿದ್ದು, ಸದ್ಯ ಘಟನಾ ಸ್ಥಳಕ್ಕೆ ಸರಗೂರು ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Key words: Bomb threat, Sarguru taluk, office







