ಗದಗ,ಡಿಸೆಂಬರ್,20,2025 (www.justkannada.in): ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿ ಕಾನೂನು ಸಚಿವ ಹೆಚ್.ಕೆ ಪಾಟೀಲ್ ಗೆ ಜೀವ ಬೆದರಿಕೆ ಹಾಕಿದ್ದ ಆರೋಪದಡಿ ವ್ಯಕ್ತಿಯನ್ನು ಬೆಟಗೇರಿ ಠಾಣಾ ಪೊಲೀಸರು ಬಂಧಿಸಿದ್ದಾರೆ.
ವೀರಣ್ಣ ಬೀಳಗಿ ಬಂಧಿತ ಆರೋಪಿ. ಈತ ಗದಗ ಜಿಲ್ಲೆ ರೋಣ ತಾಲ್ಲೂಕಿನ ಸೂಡಿ ಗ್ರಾಮದ ನಿವಾಸಿಯಾಗಿದ್ದು, ಪ್ರಚೋದಕ ಪೋಸ್ಟ್ ಹಾಕಿದ ಆರೋಪದ ಮೇಲೆ ಬಂಧಿಸಲಾಗಿದೆ.
ವೀರಣ್ಣ ಬೀಳಗಿ ಡಿಸೆಂಬರ್ 1 4ರಂದು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದು, ಗದಗ ಕ್ರೀಡಾಂಗಣದಲ್ಲಿ ಸಚಿವ ಹೆಚ್ .ಕೆ ಪಾಟೀಲ್ ನಿಲ್ಲಿಸಿ ಎಕೆ 47 ನಿಂದ ಗುಂಡಿನ ಮಳೆಗರೆಯಬೇಕು ಎಂದು ಬರೆದಿದ್ದನು. ಆರೋಪಿ ವಿರುದ್ದ ಕಾಂಗ್ರೆಸ್ ಮುಖಂಡ ಬಿಬಿ ಅಸೂಟಿ ಬೆಟಗೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ಆಧರಿಸಿ ಪೊಲೀಸರು ವೀರಣ್ಣ ಬೀಳಗಿಯನ್ನು ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
Key words: Life threat, Minister, H.K. Patil, Accused, arrested







