ನಮ್ಮಿಬ್ಬರಿಗೂ ಹೈಕಮಾಂಡ್ ಏನೋ ಹೇಳಿದೆ- ಡಿಸಿಎಂ  ಡಿಕೆ ಶಿವಕುಮಾರ್

ಬೆಂಗಳೂರು,ಡಿಸೆಂಬರ್,20,2025 (www.justkannada.in): ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ ಚರ್ಚೆಯಲ್ಲಿದ್ದು ನಿನ್ನೆ ಸಿಎಂ ಸಿದ್ದರಾಮಯ್ಯ ಸದನದಲ್ಲಿ ನಾನೇ ಐದು ವರ್ಷ ಸಿಎಂ ಎಂಬುದನ್ನ ಸ್ಪಷ್ಟಪಡಿಸಿದ್ದಾರೆ. ಈ ಮಧ್ಯೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಇಬ್ಬರನ್ನ ಕಾಂಗ್ರೆಸ್ ಹೈಕಮಾಂಡ್ ಕರೆಸಿ ಮಾತನಾಡುವ ಸಾಧ್ಯತೆ ಇದೆ.

ಈ ಸಂಬಂಧ ಮಾತನಾಡಿರುವ ಡಿಸಿಎಂ ಡಿಕೆ ಶಿವಕುಮಾರ್, ನಮ್ಮಿಬ್ಬರಿಗೂ ಹೈಕಮಾಂಡ್ ಏನೋ ಹೇಳಿದ್ದಾರೆ.  ನಮ್ಮನ್ನು ಯಾವಾಗ ಕರೆಸ್ತೀವಿ ಅಂತಾ ಫೋನ್ ಮಾಡಿ ಹೇಳಿದ್ದಾರೆ. ಹೋಗತೀವಿ ಇಬ್ಬರೂ ಹೋಗುತ್ತೀವಿ ಹೋಗದೇ ಇರೋಕೆ ಆಗುತ್ತಾ?  ನಾನಂತೂ ಕದ್ದು ದೆಹಲಿಗೆ ಹೋಗಲ್ಲ ನಿಮಗೆ ತಿಳೀಸದೆ ನಾವು ಏನು ಮಾಡಲ್ಲ ಎಂದು ಹೇಳಿದ್ದಾರೆ.

ನಾಗಸಾಧುಗಳು ಬಂದು ತಮಗೆ ಆಶೀರ್ವಾದ ಮಾಡಿದ ವಿಚಾರ ಕುರಿತು ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ನಾಗಸಾಧುಗಳು ಹುಡುಕಿ ಬಂದು ಆಶೀರ್ವಾದ ಮಾಡಿದ್ದಾರೆ. ರಾಜಕೀಯದವರಾದ ನಮಗೆ  ಎಲ್ಲರು ಬೇಕು.  ಮನೆಗ ಬಂದಾಗ ಬೇಡ ಅಂತಾ ದೂರ ತಳ್ಳೋಕೆ ಆಗುತ್ತಾ ಎಂದು ತಿಳಿಸಿದರು.

Key words: high command, DCM,  DK Shivakumar