ಯುವಕ ಕೊಲೆ ಮಾಡಿದ್ದ ಆರೋಪಿ ಬಂಧಿಸಿದ ಪೊಲೀಸರು

ಮೈಸೂರು,ಡಿಸೆಂಬರ್,19,2025 (www.justkannada.in) : ಎರಡು ದಿನಗಳ ಹಿಂದೆ ಪಟ್ಟಣದ ಮುಸ್ಲೀಂ ಬ್ಲಾಕ್ ನಿವಾಸಿಯ ಯುವಕನ ತಲೆಗೆ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಎಚ್.ಡಿ.ಕೋಟೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಪಟ್ಟಣದ ಮುಸ್ಲಿಂ ಬ್ಲಾಕ್ ನ ಕಲಾಂ ಅಲಿಯಾಸ್ ಮಹಮ್ಮದ್ ಎಂಬ ಯುವಕನೊಂದಿಗೆ ವೈಯಕ್ತಿಕ ವಿಚಾರವಾಗಿ ಜಗಳ ಮಾಡಿಕೊಂಡ ಪಟ್ಟಣದ ನಿವಾಸಿ ತೌಹೀದ್ ಪಾಷಾ ಎಂಬ ವ್ಯಕ್ತಿ ಕಲಾಂ ತಲೆಗೆ ಮರದ ದೊಣ್ಣೆಯಿಂದ ಹೊಡೆದು ಗಂಭೀರವಾಗಿ ಗಾಯಗೊಂಡ ಮೃತಪಟ್ಟ ಬಳಿಕ ಸ್ಥಳದಿಂದ ಪರಾರಿಯಾಗಿದ್ದ.

ಪ್ರಕರಣ ದಾಖಲಿಸಿಕೊಂಡ ಎಚ್.ಡಿ.ಕೋಟೆ ಪೊಲೀಸರು ಆರೋಪಿ ಬಂಧನಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಅವರ ಮಾರ್ಗದರ್ಶನದಲ್ಲಿ 2ತಂಡ ರಚಿಸಿಕೊಂಡು ಆರೋಪಿ ಬಂಧನಕ್ಕೆ ವ್ಯಾಪಕ ಬಲೆ ಬೀಸಿದ್ದರು. ತಲೆ ಮರೆಸಿಕೊಂಡಿದ್ದ ಆರೋಪಿ ಹುಣಸೂರು ಪಟ್ಟಣದಲ್ಲಿ ಅಡಗಿದ್ದಾನೆ ಎನ್ನುವ ಖಚಿತ ವರ್ತಮಾನದ ಮೇರೆಗೆ  ದಾಳಿ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದರು.

ಬಂಧಿತ ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ದಾಳಿಯಲ್ಲಿ ಎಚ್.ಡಿ.ಕೋಟೆ ಇನ್ಸ್‌ಪೆಕ್ಟರ್ ಗಂಗಾಧರ್, ಸೈಯ್ಯದ್ ಕಬೀರ್ ಉಲ್ಲಾ, ಯೋಗೇಶ, ಮೋಹನ್, ಬೀರಪ್ಪ, ಮಹೇಶ್‌ ಇದ್ದರು.

ವರದಿ

ತಿಮ್ಮರಾಜು, ಹೆಚ್ ಡಿ ಕೋಟೆ

Key words: Mysore, Police, arrest , youth,  murder