ಉತ್ತರ ಕನ್ನಡ,ಡಿಸೆಂಬರ್,19,2025 (www.justkannada.in): ಸಿಎಂ ಕುರ್ಚಿ ಕಿತ್ತಾಟಕ್ಕೆ ವಿಚಾರ ತಣ್ಣಗಾಗಿದ್ದು ಈ ಮಧ್ಯೆ ಇದೀಗ ಡಿಸಿಎಂ ಡಿಕೆ ಶಿವಕುಮಾರ್ ಶಕ್ತಿ ದೇವತೆಯ ಮೊರೆ ಹೋಗಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲ್ಲೂಕಿನ ಅಂದ್ಲಿಯ ಜಗದೀಶ್ವರಿ ದೇವಾಲಯಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಭೇಟಿ ನೀಡಿದ್ದಾರೆ. ಇಂದು ಅಮಾವಸ್ಯೆ ಹಿನ್ನೆಲೆ ತಾಯಿ ಜಗದೀಶ್ವರಿಗೆ ಡಿಕೆ ಶಿವಕುಮಾರ್ ವಿಶೇಷ ಪೂಜೆ ಸಲ್ಲಿಕೆ ಮಾಡುತ್ತಿದ್ದು, 9 ಬಗೆಯ ಆರತಿ, ಬಲಿ ಸೇವೆ ಪಟ್ಟ ಸೀರೆ ಅರ್ಪಿಸಲಿದ್ದಾರೆ. ಬಳಿಕ ಹಿಂಗಾರ ಹೂವಿಟ್ಟು ಫಲ ಕೇಳಲಿದ್ದಾರೆ.
ಬೆಳಗಾವಿಯಿಂದ ಹೆಲಿಕಾಪ್ಟರ್ ಮೂಲಕ ಗೋಕರ್ಣಕ್ಕೆ ಆಗಮಿಸಿ ಡಿಕೆ ಶಿವಕುಮಾರ್ ನಂತರ ಅಂದ್ಲೆಯ ದೇವಾಲಯಕ್ಕೆ ತೆರಳಿದರು. ದೇವಾಲಯದಲ್ಲಿ ಅರ್ಚಕರ ನೇತೃತ್ವದಲ್ಲಿ ಏಕಾಂತ ಪೂಜೆ ಹಾಗೂ ಪ್ರಶ್ನಾ ಫಲ ಕೇಳಲಿದ್ದಾರೆ. ಸಿಎಂ ಸ್ಥಾನದ ಗೊಂದಲದ ನಡುವೆ ಅವರ ಈ ಭೇಟಿ ಕುತೂಹಲ ಮೂಡಿಸಿದೆ.
Key words: DCM, DK Shivakumar, visits, Jagadeeshwari temple, Andli







