ಮೈಸೂರು ಕೇಂದ್ರ ಕಾರಾಗೃಹಕ್ಕೆ ಡಿಜಿಪಿ ಅಲೋಕ್ ಕುಮಾರ್ ದಿಢೀರ್ ಭೇಟಿ.

ಮೈಸೂರು ,ಡಿಸೆಂಬರ್,18,2025 (www.justkannada.in):  ಮೈಸೂರು ಕೇಂದ್ರ ಕಾರಾಗೃಹಕ್ಕೆ ಡಿಜಿಪಿ ಅಲೋಕ್ ಕುಮಾರ್ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮೈಸೂರಿನ ಅಶೋಕ ರಸ್ತೆಯಲ್ಲಿರುವ  ಕೇಂದ್ರ ಕಾರಾಗೃಹಕ್ಕೆ ಅಲೋಕ್ ಕುಮಾರ್ ಭೇಟಿ ನೀಡಿದ್ದು, ಕಾರಾಗೃಹ ಇಲಾಖೆ‌ ಡಿಜಿಪಿಯಾದ ಬಳಿಕ ಮೊದಲ ಭೇಟಿ ಇದಾಗಿದೆ. ಅಲೋಕ್ ಕುಮಾರ್ ಅವರ ಭೇಟಿಗೂ ಮುನ್ನ 9 ಮೊಬೈಲ್ 11 ಸಿಮ್ ಕಾರ್ಡ್ ವಶಕ್ಕೆ ಪಡೆಯಲಾಗಿತ್ತು.

ಕೇಂದ್ರ ಕಾರಾಗೃಹದಲ್ಲಿ 2  ಗಂಟೆಗಳ ಕಾಲ ಪರಿಶೀಲಿಸಿ ನಂತರ ಮಾತನಾಡಿದ ಅಲೋಕ್ ಕುಮಾರ್ ಅವರು, ಮೈಸೂರು ಕೇಂದ್ರ ಕಾರಾಗೃಹಕ್ಕೆ AI ಆಧಾರಿತ ಕ್ಯಾಮರಾ ಅಳವಡಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಜೈಲಿನ ಸುತ್ತಮುತ್ತಲಿನ ಪ್ರದೇಶಗಳಿಂದ ಜೈಲಿಗೆ ಗಾಂಜಾ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ. ಜೈಲಿನ ಜಾಮರ್ ಸುಧಾರಣೆ ಬಗ್ಗೆ ಟಿಸಿಎಲ್  ಕಂಪನಿ ಜೊತೆಗೆ ಮಾತುಕತೆ ಮಾಡಲಾಗುತ್ತದೆ. ಜಾಮರ್ ಎಫೆಕ್ಟ್ ಇನ್ನೂ ಹೆಚ್ಚಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ನುಡಿದರು.

Key words: DGP, Alok Kumar, visit, Mysore Central Jail.