ಮೈಸೂರು,ಡಿಸೆಂಬರ್,17,2025 (www.justkannada.in): ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ. ಎಸ್. ಎನ್ ಹೆಗ್ಡೆ ಅವರ ನಿಧನಕ್ಕೆ ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಈ.ಸಿ.ನಿಂಗರಾಜ್ ಗೌಡರವರು ಸಂತಾಪ ಸೂಚಿಸಿದ್ದಾರೆ. 
ಪ್ರೊ. ಎಸ್.ಎನ್ ಹೆಗ್ಡೆ ಅವರು ಕುಲಪತಿ ಅವಧಿಯಲ್ಲಿ ಮೈಸೂರು ವಿವಿಯ ಶೈಕ್ಷಣಿಕ ಹಾಗೂ ಮೂಲ ಸೌಕರ್ಯ ಅಭಿವೃದ್ದಿಗೆ ಹೆಚ್ಚಿನ ಒತ್ತು ನಿಡಿದ್ದರು. ವಿಜ್ಞಾನ ವಿಭಾಗದ ಹಿನ್ನೆಲೆಯಾಗಿದ್ದರಿಂದ ಕುಲಪತಿ ಅವಧಿಯಲ್ಲಿ ವೈಜ್ಞಾನಿಕ ಸಂಶೋಧನೆಗೂ ಹೆಚ್ಚಿನ ಪ್ರೋತ್ಸಾಹ ನೀಡುವ ಮೂಲಕ ವಿಜ್ಞಾನದ ಅಭಿವೃದ್ದಿಗೆ ಒತ್ತು ನೀಡಿದ್ದರು. ನನ್ನ ಗುರು ಸಮಾನರಾಗಿದ್ದ ಎಸ್. ಎನ್ ಹೆಗ್ಡೆ ಅವರ ನಿಧನದಿಂದ ತುಂಬಲಾರದ ನಷ್ಟ ಉಂಟಾಗಿದೆ ಎಂದು ಡಾ.ಈ.ಸಿ.ನಿಂಗರಾಜ್ ಗೌಡರವರು ಕಂಬನಿ ನುಡಿದಿದ್ದಾರೆ.
ಪ್ರೊ. ಎಸ್. ಎನ್ ಹೆಗ್ಡೆ ಅವರು ಎರಡು ಅವಧಿಯಲ್ಲಿ ಮೈಸೂರು ವಿಶ್ವ ವಿದ್ಯಾನಿಲಯದ ಕುಲಪತಿಯಾಗಿ ಸೇವೆ ಸಲ್ಲಿಸಿದ್ದರು. 1997ರಿಂದ 2003ರವರೆಗೆ ಮೈಸೂರು ವಿವಿ ಕುಲಪತಿಯಾಗಿದ್ದರು. ಎಸ್.ಎನ್ ಹೆಗ್ಡೆ ಅವರು ಪ್ರಾಣಿಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು.
Key words: Dr. E.C. Ningaraj Gowda, condoles, retired VC, S.N. Hegde







