ಗೃಹಲಕ್ಷ್ಮೀ ಯೋಜನೆ: 46 ಸಾವಿರ ಕೋಟಿ ರೂ.ಹಣ ಪಾವತಿ- ಸಚಿವೆ  ಲಕ್ಷ್ಮೀ ಹೆಬ್ಬಾಳ್ಕರ್

ಬೆಳಗಾವಿ,ಡಿಸೆಂಬರ್,17,2025 (www.justkannada.in): ಗೃಹಲಕ್ಷ್ಮೀ ಯೋಜನೆ ಹಣ ಸಮರ್ಪಕವಾಗಿ ಮಹಿಳೆಯರ ಖಾತೆಗೆ ಬರುತ್ತಿಲ್ಲ. ಫೆಬ್ರವರಿ, ಮಾರ್ಚ್ ತಿಂಗಳ ಹಣ ಇನ್ನೂ ಸಂದಾಯವಾಗಿಲ್ಲ. ಗೃಹಲಕ್ಷ್ಮೀ ಯೋಜನೆಯಲ್ಲಿ ಮಹಿಳೆಯರಿಗೆ ಮೋಸವಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದ್ದು ಈ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್,  ರಾಜ್ಯದಲ್ಲಿ ಈವರೆಗೆ ಗೃಹಲಕ್ಷ್ಮೀ ಮಹಿಳೆಯರಿಗೆ 23 ಕಂತಿನ ಹಣ ಬಿಡುಗಡೆ ಮಾಡಿದ್ದೇವೆ. ಆಗಸ್ಟ್ ತಿಂಗಳವರೆಗೆ 46 ಸಾವಿರ ಕೋಟಿ ರೂ. ಹಣವನ್ನು 1 ಕೋಟಿ 26 ಲಕ್ಷ ಮಹಿಳೆಯರಿಗೆ ನೀಡಿದ್ದೇವೆ ಎಂದಿದ್ದಾರೆ.

ನನ್ನ ಹೇಳಿಕೆಗೆ ಈಗಲೂ ಬದ್ದ ಇದನ್ನು ಸದನದಲ್ಲಿ ಹೇಳಿದ್ದೇನೆ.  ಇನ್ನುಳಿದ ವಿಚಾರ ಸದನದಲ್ಲಿ ಮಾತನಾಡುತ್ತೇನೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.

Key words: Grihalakshmi Yojana, Rs 46 thousand crores, paid, Minister, Lakshmi Hebbalkar