ಮಗಳಿಗಾಗಿ ಪತ್ನಿಯನ್ನೇ ಕಿಡ್ನಾಪ್ ಮಾಡಿದ ಪತಿ

ಬೆಂಗಳೂರು,ಡಿಸೆಂಬರ್,16,2025 (www.justkannada.in):  ತನ್ನ ಮಗಳಿಗಾಗಿ ಹೆಂಡತಿಯನ್ನ ಪತಿ ಕಿಡ್ನಾಪ್ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ನಿರ್ಮಾಪಕ  ಹರ್ಷವರ್ದನ್ ತನ್ನ ಪತ್ನಿ ಚೈತ್ರಾರನ್ನು ಕಿಡ್ನಾಪ್ ಮಾಡಿ ತನ್ನ ಮಗಳನ್ನು ತನಗೆ ನೀಡುವಂತೆ ಒತ್ತಾಯಿಸಿದ್ದರು.  ನಿರ್ಮಾಪಕ ಹರ್ಷವರ್ದನ್ ಮತ್ತು ನಟಿ ಚೈತ್ರಾ ಪ್ರೀತಿಸಿ ಮದುವೆಯಾಗಿದ್ದು, ನಂತರ ಕೌಟುಂಬಿಕ ಕಲಹದಿಂದ ಕಳೆದ 1 ವರ್ಷದಿಂದ ದಂಪತಿ ಬೇರೆಯಾಗಿದ್ದರು.

ಈ ಮಧ್ಯೆ ನಿರ್ಮಾಪಕ ಹರ್ಷವರ್ದನ್ ಮೈಸೂರಿನಲ್ಲಿ ಶೂಟಿಂಗ್ ಇದೆ ಎಂದು ಹೇಳಿಸಿ  ತನ್ನ ಸ್ನೇಹಿತರ ಮೂಲಕ ಬೆಂಗಳೂರಿನ ನೈಸ್ ರೋಡ್ ಬಳಿ ಪತ್ನಿ ಚೈತ್ರಾರನ್ನ ಕಿಡ್ನಾಪ್ ಮಾಡಿಸಿದ್ದರು. ಈ ವೇಳೆ ತನ್ನ ಮಗಳನ್ನ ತನಗೆ ಒಪ್ಪಿಸುವಂತೆ ಒತ್ತಾಯಿಸಿದ್ದರು. ಚೈತ್ರ ತಾಯಿಗೆ ಕರೆ ಮಾಡಿ ನನ್ನ ಮಗಳನ್ನ ತಂದು ಕೊಡಿ ನಿಮ್ಮ ಮಗಳನ್ನ  ಸೇಫಾಗಿ ಬಿಡುತ್ತೇನೆ ಎಂದು ಹರ್ಷವರ್ದನ್ ಹೇಳಿದ್ದರು.

ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಕಿಡ್ನಾಪ್ ಪ್ರಕರಣ ದಾಖಲಾಗಿತ್ತು. ಆರೋಪಿ ಹರ್ಷವರ್ದನ್  ಚೈತ್ರಾ ಅವರನ್ನು ಪೊಲೀಸರು ವಿಚಾರಣೆ ನಡೆಸಿದ್ದು ಈ ವೇಳೆ ಕೌಟುಂಬಿಕ ಕಲಹ. ಮಾತುಕತೆ ಮೂಲಕ ಬಗೆಹರಿಸಿಕೊಳ್ಳುತ್ತೇವೆ ಎಂದು ದಂಪತಿ ಹೇಳಿದ್ದಾರೆ. ಈ ಸಮಯದಲ್ಲಿ ಪೊಲೀಸರು ಹೇಳಿಕೆ ದಾಖಲಿಸಿಕೊಂಡು ಕಳುಹಿಸಿದ್ದಾರೆ. ಮತ್ತೆ ವಿಚಾರಣೆಗೆ ಬರುವಂತೆ ಸೂಚನೆ ನೀಡಿದ್ದಾರೆ.

Key words: Husband, kidnaps, wife , daughter