ನನ್ನನ್ನ ಸಿಎಂ ಮಾಡ್ತೀನಿ ಅಂದ್ರೆ ಬಿಜೆಪಿಗೆ ವಾಪಸ್ ಹೋಗ್ತೇನೆ- ಶಾಸಕ ಯತ್ನಾಳ್

ಬೆಳಗಾವಿ,ಡಿಸೆಂಬರ್,12,2025 (www.justakannada.in):  ನನ್ನನ್ನ ಸಿಎಂ ಮಾಡುತ್ತೀವಿ ಅಂದರೆ ಬಿಜೆಪಿಗೆ ವಾಪಸ್ ಹೋಗುತ್ತೇನೆ ಎಂದು  ಶಾಸಕ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್,  ನನ್ನನ್ನ ಸಿಎಂ ಮಾಡುತ್ತೀನಿ  ಅಂದ್ರೆ ಬಿಜೆಪಿಗೆ ವಾಪಸ್ ಹೋಗುತ್ತೇನೆ. ಬಿಜೆಪಿಗೆ ಬನ್ನಿ ಅಂತಾ ಆರ್ ಅಶೋಕ್ ಕರೆದಿದ್ದಾರೆ. ಅಮಿತ್ ಶಾ ಬಳಿ ನಿಯೋಗ ಹೋಗುವ ಬಗ್ಗೆ ಹೇಳಿದ್ದಾರೆ  ಅಶೋಕ್ ಕಚೇರಿಯಲ್ಲಿ ಬಾಗಿಲು ಹಾಕಿ ಮಾತನಾಡಿದ್ದೇವೆ.  ಪಕ್ಷದ ಪರಿಸ್ಥಿತಿ ಕೆಟ್ಟಿದೆ.  ಡಿಕೆ ಶಿವಕುಮಾರ್ ಸಿದ್ದರಾಮಯ್ಯ ಜೊತೆ ಹೊಂದಾಣಿಕೆ ಮಾಡೋರು ಬೇಡ. ಅಮಿತ್ ಶಾ ಜೊತೆ ಮಾತನಾಡುತ್ತೇನೆ ಅಂದ್ರು ಎಂದು ಶಾಸಕ ಯತ್ನಾಳ್ ತಿಳಿಸಿದರು.

ಡಿಸೆಂಬರ್ 19ಕ್ಕೆ ಡಿಸಿಎಂ, ಸಿಎಂ ದೆಹಲಿಗೆ  ಹೋಗುತ್ತಾರೆ. ಡಿಕೆ ಶಿವಕುಮಾರ್ ಸಿಎಂ ಆದರೇ ಈಗಲೇ ಆಗಬೇಕು. ಮುಂದೆ ಕಾಂಗ್ರೆಸ್ ಬರಲ್ಲ.  ಡಿಕೆ ಶಿವಕುಮಾರ್ ಸಿಎಂ ಆಗಲ್ಲ. ಜೋತಿಷ್ಯ ಹೇಳಿದವರು ಅಂಗಡಿ ಬಂದ್ ಮಾಡಿಕೊಳ್ಳಬೇಕು. 11 ಲಕ್ಷ ಕೊಟ್ಟ ತಕ್ಷಣ ತಥಾಸ್ತು ಅಂತಾರೆ. ಸಿದ್ದರಾಮಯ್ಯ  ಡಿಕೆ ಶಿವಕುಮಾರ್ ಗೆ ಸುಲಭವಾಗಿ ಕುರ್ಚಿ ಬಿಡೋದಿಲ್ಲ ಎಂದು ಲೇವಡಿ ಮಾಡಿದರು.

Key words: DK Shivakumar,  become, CM, MLA, Basanagowda Patil Yatnal