ಸಿಎಂ ಆಯ್ಕೆ ವೇಳೆ ಯಾವುದೇ ಗಡುವು ಕೊಟ್ಟಿಲ್ಲ- ಸಚಿವ ಕೆ.ಜೆ ಜಾರ್ಜ್

ಬೆಳಗಾವಿ,ಡಿಸೆಂಬರ್,12,2025 (www.justkannada.in):  ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಬ್ರೇಕ್ ಫಾಸ್ಟ್ ಮೀಟಿಂಗ್ ಬಳಿಕ ತಣ್ಣಗಾಗಿದ್ದ ಸಿಎಂ  ಬದಲಾವಣೆ ವಿಚಾರದ ಚರ್ಚೆ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಈ ಕುರಿತು ಇಂಧನ ಸಚಿವ ಕೆ.ಜೆ ಜಾರ್ಜ್ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿರು ಸಚಿವ ಕೆ.ಜೆ ಜಾರ್ಜ್,   ಸಿಎಂ ಆಯ್ಕೆ  ಮಾಡುವ ವೇಳೆ ಯಾವುದೇ ಗಡುವು ಕೊಟ್ಟಿಲ್ಲ.  ಸಿಎಲ್ ಪಿ ಸಭೆಯಲ್ಲಿ ಸಿಎಂ ಆಯ್ಕೆ ಮಾಡುವಾಗ ಯಾವುದೇ ಗಡುವು ನೀಡಿಲ್ಲ ಎಂದಿದ್ದಾರೆ.

ಎಐಸಿಸಿ ವಿಕ್ಷಕರ ಮುಂದೆಯೇ ಸಿಎಂ ಆಯ್ಕೆ ಮಾಡಲಾಗಿದೆ ಯಾವುದೇ ಗಡುವು ನೀಡಿಲ್ಲ ಸದ್ಯ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ ಎಂದು ಕೆ.ಜೆ ಜಾರ್ಜ್ ತಿಳಿಸಿದ್ದಾರೆ.

Key words: No deadline, CM, selection, Minister, K.J. George