ಅಧಿವೇಶನ ಮುಗಿದ ಬಳಿಕ ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ- ಶಾಸಕ ಇಕ್ಬಾಲ್ ಹುಸೇನ್

ಬೆಳಗಾವಿ,ಡಿಸೆಂಬರ್,12,2025 (www.justkannada.in):  ಅಧಿವೇಶನ ಮುಗಿದ ಬಳಿಕ ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ ಎಂದು ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಸ್ಪೋಟಕ ಹೇಳಿಕೆ ನೀಡಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಇಕ್ಬಾಲ್ ಹುಸೇನ್, ನಂಬರ್ ಮುಖ್ಯ ಅಲ್ಲ ಹೈಕಮಾಂಡ್ ನಿರ್ದೇಶನ ಮುಖ್ಯ. ನಾನೇ ಶುಭ ಸುದ್ದಿ ಕೊಡ್ತಾ ಇದ್ದೇನಲ್ಲ. ಅಧೀವೇಶನ ಬಳಿಕ ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ ಎಂದು ತಿಳಿಸಿದರು.

ಎಲ್ಲವನ್ನೂ ಹೈಕಮಾಂಡ್ ತೀರ್ಮಾನಿಸುತ್ತೆ. 50 ರಿಂದ 60 ಜನರು ಡಿನ್ನರ್ ಗೆ ಸೇರಿದ್ರು.  ರಾಜಕೀಯ ಚರ್ಚೆ ಆಗಿಲ್ಲ.  224 ಶಾಸಕರೂ ಕರೆದರೆ ಊಟಕ್ಕೆ ಬರುತ್ತಾರೆ. ಡಿಕೆ ಶಿವಕುಮಾರ್ ಕರೆದರೆ ಊಟಕ್ಕೆ ಎಲ್ಲರೂ ಬರುತ್ತಾರೆ.  ಕಾಂಗ್ರೆಸ್ ಜೆಡಿಎಸ್ ಬಿಜೆಪಿ ಅಂತಲ್ಲ ಡಿಕೆ ಶಿವಕುಮಾರ್ ಗೆ ಎಲ್ಲರೂ ಆತ್ಮೀಯರೆ. ಎಲ್ಲರೂ ಸ್ನೇಹಿತರೇ ಎಂದು ತಿಳಿಸಿದರು.

Key words: DK Shivakumar, CM, after, session, MLA, Iqbal Hussain