ಮಂಡ್ಯ,ಡಿಸೆಂಬರ್,8,2025 (www.justkannada.in): ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಬೆಳಗೊಳದಲ್ಲಿರುವ ಭಂಭಂ ಆಶ್ರಮದಲ್ಲಿ ಪೀಠಾಧಿಪತಿ, ಸಿಬ್ಬಂದಿ, ಮಹಿಳಾ ಭಕ್ತರ ಮೇಲೆ ಹಲ್ಲೆ, ದೌರ್ಜನ್ಯವಾಗಿರುವ ಘಟನೆ ನಡೆದಿದೆ.
ಆಶ್ರಮದ ಈ ಹಿಂದಿನ ಟ್ರಸ್ಟಿಯಾಗಿದ್ದ ಕಬೀರ್, ಕಿರಣ್ ಬೆಂಬಲಿಗರಾದ ಕೇಶವ ರಾಯಡು ಸೇರಿ ಹಲವರು ಪ್ರಸ್ತುತ ಮಠದ ಪೀಠಾಧ್ಯಕ್ಷೆಯಾಗಿರುವ ಮಮತಾ ಹಾಗೂ ಬೆಂಬಗಲಿಗರನ್ನು ಹೊರ ಹಾಕಿ ಹಲ್ಲೆ ನಡೆಸಿ ದೌರ್ಜನ್ಯವೆಸಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ದಾಯಾದಿಗಳ ಕಲಹದಿಂದ ಭಂಭಂ ಆಶ್ರಮದ ಸಿಬ್ಬಂದಿ ಬೀದಿಗೆ ಬಂದಿದ್ದು ಆಶ್ರಮದ ಹೊರಗೆ ಕುಳಿತು ಮಹಿಳಾ ಭಕ್ತರು ಕಣ್ಣೀರಾಕಿದ್ದಾರೆ. ಅಲ್ಲದೆ ನ್ಯಾಯ ದೊರಕಿಸಿಕೊಡುವಂತೆ ಮಹಿಳಾ ಭಕ್ತರು ಅಳಲು ತೋಡಿಕೊಂಡಿದ್ದಾರೆ.
Key words: Attack, head priest, staff, Bham bham Ashram, Belagola







