ಮೈಸೂರು,ಡಿಸೆಂಬರ್,8,2025 (www.justkannada.in): ಒಂದು ಕೋಟಿ ರೂ. ಹಣಕ್ಕಾಗಿ ರಿಯಲ್ ಎಸ್ಟೇಟ್ ಹಾಗೂ ಲೇವಾದೇವಿ ಉದ್ಯಮಿಯನ್ನು ಕಿಡ್ನಾಪ್ ಮಾಡಿದ್ದ ಐವರು ಆರೋಪಿಗಳನ್ನ ಮೈಸೂರಿನ ವಿಜಯ ನಗರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿ ಜೈಲಿಗಟ್ಟಿದ್ದಾರೆ. 
ಬೆಳವಾಡಿ ಗ್ರಾಮದ ವಿಜಯ ನಗರ ನಾಲ್ಕನೇ ಹಂತದ ನಿವಾಸಿಉದ್ಯಮಿ ಲೋಕೇಶ್ ಕಿಡ್ನಾಪ್ ಆಗಿದ್ದ ಉದ್ಯಮಿ. ಅದೇ ಬೆಳವಾಡಿ ಗ್ರಾಮದ ಅಪಹರಣಕಾರರಾದ ಹೆಚ್.ಎಂ. ಸಂತೋಷ್, ಹೆಚ್.ಎಸ್. ಅಭಿಷೇಕ್, ಆರ್. ಪ್ರಜ್ವಲ್, ಬಿ.ಎನ್. ದರ್ಶನ್, ಪ್ರೀತಮ್ ಬಂಧಿತರು,
ಕೃತ್ಯ ನಡೆದ ಏಳು ಗಂಟೆಯಲ್ಲಿಯೇ ಪೊಲೀಸರು ಐವರನ್ನು ಆರೋಪಿಗಳನ್ನ ಬಂಧಿಸಿದ್ದು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕೃತ್ಯಕ್ಕೆ ಬಳಸಿದ್ದ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಇನ್ನು ಅಪಹರಣಕ್ಕೊಳಗಾಗಿದ್ದ ಉದ್ಯಮಿ ಲೋಕೇಶ್ ಅವರನ್ನ ಪೊಲೀಸರು ರಕ್ಷಿಸಿದ್ದಾರೆ.
ಪೇಂಟರ್ ಕೆಲಸ ಮಾಡಿಕೊಂಡಿದ್ದ ಬೆಳವಾಡಿ ಗ್ರಾಮದ ಸಂತೋಷ್, ಉದ್ಯಮಿ ಲೋಕೇಶ್ಗೆ ಪರಿಚಿತನಾಗಿದ್ದ, ಉದ್ಯಮಿಯ ಹಣಕಾಸು ವ್ಯವಹಾರದ ಬಗ್ಗೆ ಮಾಹಿತಿ ತಿಳಿದಿದ್ದ ಸಂತೋಷ್. ಈತನನ್ನು ಅಪಹರಿಸಿದರೆ ಹಣ ಗಳಿಸಬಹುದು ಎಂಬ ಕೆಟ್ಟ ಆಲೋಚನೆಯಿಂದ ಸಂಚು ರೂಪಿಸಿದ್ದಾನೆ. ಇದಕ್ಕೆ ಆತನ ಸ್ನೇಹಿತರು ಸಾಥ್ ನೀಡಿದ್ದರು.
ಲೋಕೇಶ್ ಬೈಕ್ ನಿಲ್ಲಿಸಿ ಮೊಬೈಲ್ನಲ್ಲಿ ಮಾತನಾಡುತ್ತಿದ್ದ ವೇಳೆ ಹಿಂದಿನಿಂದ ಅಪಹರಣಕಾರರು, ಲೋಕೇಶ್ ಕಣ್ಣಿಗೆ ಖಾರದ ಪುಡಿ ಎರಚಿ ಹಲ್ಲೆ ನಡೆಸುವ ಕಾರಿನಲ್ಲಿ ಕೂರಿಸಿಕೊಂಡು ಎಸ್ಕೇಪ್ ಆಗಿದ್ದರು. ಈ ಕುರಿತು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಶೋಧ ಕಾರ್ಯ ಆರಂಭಿಸಿ ಆರೋಪಿಗಳನ್ನ ಹೆಡೆಮುರಿ ಕಟ್ಟಿದ್ದಾರೆ.
Key words: Mysore, Kidnap, businessman, Five, arrested







