ಯಾವ ಪಟ್ಟದ ಕಿತ್ತಾಟವೂ ಇಲ್ಲ: ಅವರೇ 5 ವರ್ಷ ಸಿಎಂ- MLC ಯತೀಂದ್ರ ಸಿದ್ದರಾಮಯ್ಯ

ಬೆಳಗಾವಿ,ಡಿಸೆಂಬರ್,8,2025 (www.justkannada.in): ಕಾಂಗ್ರೆಸ್‍ ನಲ್ಲಿ ಯಾವ ಪಟ್ಟದ ಕಿತ್ತಾಟವೂ ಇಲ್ಲ. ಸಿದ್ದರಾಮಯ್ಯ ಅವರೇ 5 ವರ್ಷಗಳ ಕಾಲ ಸಿಎಂ ಆಗಿರುತ್ತಾರೆ ಎಂದು ವಿಧಾನ ಪರಿಷತ್ ಸದಸ್ಯ  ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.

ಬೆಳಗಾವಿಯಲ್ಲಿ ಇಂದು ಮಾಧ್ಯಮ ಜೊತೆ ಮಾತನಾಡಿದ ಎಂಎಲ್ ಸಿ ಯತೀಂದ್ರ ಸಿದ್ದರಾಮಯ್ಯ, ಸಿದ್ದರಾಮಯ್ಯ 5 ವರ್ಷ ಸಿಎಂ ಆಗಿರುತ್ತಾರೆ.  ಕಾಂಗ್ರೆಸ್ ನಲ್ಲಿ ಯಾವ ಪಟ್ಟದ ಕಿತ್ತಾಟವೂ ಇಲ್ಲ ಇದನ್ನೇ ವಿಪಕ್ಷ ನಾಯಕರು ಬಳಸಿಕೊಳ್ಳುತ್ತಿದ್ದಾರೆ. ಸಿಎಂ ಬದಲಾಗುತ್ತಾರೆ ಎಂಬ ಕನಸು ಕಾಣಬೇಕು ಅಷ್ಟೆ ಐದು ವರ್ಷ ಪೂರೈಸುತ್ತಾರೆ ಅಂತಾ ನಂಬಿಕೆ ಇದೆ ಎಂದರು.

ದೆಹಲಿಯಲ್ಲಿಯೂ ಬದಲಾವಣೆ ಬಗ್ಗೆ ಚರ್ಚೆ ಆಗಿಲ್ಲ. ಸಿಎಂರನ್ನು ಈವರೆಗೆ ಹೈಕಮಾಂಡ್ ಭೇಟಿ ಮಾಡಿಲ್ಲ ಎಂದು  ಎಂಎಲ್ ಸಿ ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.

Key words: no contest, post, CM, 5 years, MLC, Yathindra Siddaramaiah