ಬೆಳಗಾವಿ,ಡಿಸೆಂಬರ್,8,2025 (www.justkannada.in): ಕಾಂಗ್ರೆಸ್ ಹೋಗುವುದಾದರೇ ಹೇಳಿ ಹೋಗುತ್ತೇನೆ. ಕದ್ದು ಹೋಗಲ್ಲ ಎಂದು ಬಿಜೆಪಿ ಶಾಸಕ ಶಿವರಾಂ ಹೆಬ್ಬಾರ್ ತಿಳಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಶಿವರಾಂ ಹೆಬ್ಬಾರ್, ಅಧಿವೇಶನದಲ್ಲಿ ಉತ್ತರಕನ್ನಡ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುತ್ತೇನೆ. ಕಬ್ಬು ಬೆಳಗಾರರ ಸಮಸ್ಯೆ ಒಂದು ಹಂತದಲ್ಲಿ ಮುಗಿದಿದೆ. ಎಲ್ಲಾ ಕಾರ್ಖಾನೆಗಳ ಮಾಲೀಕರು ಸಿಎಂ ಸೂಚನೆ ಪಾಲಿಸುತ್ತಿದ್ದಾರೆ. ಹಾವೇರಿಯಲ್ಲಿ ನನ್ನ ಫ್ಯಾಕ್ಟರಿ ಇದೆ ಸಮಸ್ಯೆ ಬಗೆಹರಿಸಿದೆ ಎಂದರು.
ನಾಳೆ ರಾಜ್ಯ ಸರ್ಕಾರದ ವಿರುದ್ದ ಬಿಜೆಪಿ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿದ ಶಿವರಾಂ ಹೆಬ್ಬಾರ್, ವಿಜಯೇಂದ್ರಗೆ ಬೇರೆ ಏನು ಕೆಲಸ ಇದೆ. ಪ್ರತಿಭಟನೆ ಮಾಡಲು ಉಚ್ಚಾಟನೆ ಮಾಡಿದ ಮೇಲೆ ಅವರ ಜತೆ ಹೋಗುವ ಅವಶ್ಯಕತೆ ಏನಿದೆ? ಬಿಜೆಪಿ ಹೇಳೋದೆಲ್ಲಾ ನ್ಯಾಯ ಅಂತಾ ಒಪ್ಪುವುದಕ್ಕೆ ಆಗಲ್ಲ ಎಂದು ಶಿವರಾಂ ಹೆಬ್ಬಾರ್ ತಿಳಿಸಿದರು.
Key words: join, Congress , MLA, Shivaram Hebbar







