100 ಬಿಲಿಯನ್ ಡಾಲರ್ ವ್ಯಾಪಾರ ವೃದ್ಧಿಗೆ ಒಪ್ಪಂದ: ಇಂಧನ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಿಲ್ಲ- ಪುಟಿನ್

ನವದೆಹಲಿ,ಡಿಸೆಂಬರ್,5,2025 (www.justkannada.in):  2030ರವರೆಗೂ 100 ಬಿಲಿಯನ್ ಡಾಲರ್ ವ್ಯಾಪಾರ ವೃದ್ಧಿಗೆ ಒಪ್ಪಂದ ಮಾಡಿದ್ದೇವೆ. ಕಡತವನ್ನು ಹಸ್ತಾಂತರ ಮಾಡಕೊಂಡಿದ್ದೇವೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮನ್ ಪುಟಿನ್ ತಿಳಿಸಿದರು.

ನವದೆಹಲಿಯ ಹೈದರಾಬಾದ್ ಹೌಸ್ ನಲ್ಲಿ ಉಭಯ ರಾಷ್ಟ್ರಗಳ ನಡುವೆ ದ್ವಿಪಕ್ಷೀಯ ಮಾತುಕತೆ ನಡೆಯಿತು.  ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ  ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮನ್ ಪುಟಿನ್ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಭಾರತ ನಿನ್ನೆ ಆಯೋಜಿಸಿದ್ದ ಔತಣಕೂಟಕ್ಕೆ ನನ್ನ ಧನ್ಯವಾದಗಳು ಜಾಗತಿಕ ಹಾಗೂ ಸ್ಥಳೀಯ ವಿಷಯಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಉಭಯ ರಾಷ್ಟ್ರಗಳ ತನಿಖಾ ಸಂಸ್ಥೆಗಳು ಜಂಟಿಯಾಗಿ ಕಾರ್ಯನಿರ್ವಹಿಸುತ್ತಿವೆ. 100 ಬಿಲಯನ್ ಡಾಲರ್  ವ್ಯಾಪರ ವೃದ್ದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ.  ಹೊಸ ಒಪ್ಪಂದಗಳ ಬಗ್ಗೆ ಕಡತಗಳನ್ನ ಹಸ್ತಾಂತರ ಮಾಡಿಕೊಂಡಿದ್ದೇವೆ ಎಂದರು.

ಮುಂದೆ ಕೂಡ ಇಂಧನ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಿಲ್ಲ.  ಯಾವುದೇ ಅಡೆತಡೆ ಇಲ್ಲದೆ ಇಂಧನ ಪೂರೈಕೆಗ ಮಾಡಲಾಗುತ್ತದೆ.  ಉಭಯ ರಾಷ್ಟ್ರಗಳು ಜೊತೆಯಾಗಿ ಕೆಲಸ ಮಾಡುತ್ತೇವೆ ಎಂದು ಪುಟಿನ್ ತಿಳಿಸಿದರು.

Key words: Agreement, boost, trade, $100 billion, Russia, Putin, PM Modi