ನಾಳೆ ಕೃಷಿ ಮೇಳ: ಸ್ಥಳ ಮತ್ತು ಹೆಲಿಪ್ಯಾಡ್ ಪರಿಶೀಲಿಸಿದ ಜಿಲ್ಲಾಧಿಕಾರಿ

ಮಂಡ್ಯ,ಡಿಸೆಂಬರ್,4,2025 (www.justkannada.in): ಕೃಷಿ ಮೇಳ-2025 ರ ಉದ್ಘಾಟನೆಗೆ ಡಿಸೆಂಬರ್ 5 ರಂದು ಜಿಲ್ಲೆಗೆ ಆಗಮಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಲ್ಲನಾಯಕ ಕಟ್ಟೆ ಹೆಲಿಪ್ಯಾಡ್ ನಿಂದ ವಿ.ಸಿ ಫಾರಂ ಗೆ ಆಗಮಿಸಲಿದ್ದು ಜಿಲ್ಲಾಧಿಕಾರಿ ಡಾ.ಕುಮಾರ ಅವರು ಸ್ಥಳ ಪರಿಶೀಲನೆ ನಡೆಸಿದರು.

ಇಂದು ವಿ‌.ಸಿ ಫಾರಂ ಗೆ ಜಿಲ್ಲಾಧಿಕಾರಿ ಡಾ.ಕುಮಾರ ಅವರು ಭೇಟಿ ನೀಡಿ ಕೃಷಿ ಮೇಳ 2025 ನಡೆಯಲಿರುವ ಸ್ಥಳವನ್ನು ಪರಿಶೀಲನೆ ನಡೆಸಿದರು.

ಕೃಷಿ ವಿ.ಸಿ ಫಾರಂ ನಲ್ಲಿ ಬೆಳೆಸಲಾಗಿರುವ ಕೃಷಿ ಪ್ರಾತ್ಯಕ್ಷಿಕೆಗಳನ್ನು ಪರಿವೀಕ್ಷಣೆ ಮಾಡಿದರು. ‌ಕೃಷಿ ಮೇಳದ ಮಳಿಗೆಗಳು, ಆಸನ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ಪಾರ್ಕಿಂಗ್ ವ್ಯವಸ್ಥೆ, ಆಹಾರ ವ್ಯವಸ್ಥೆ, ವೇದಿಕೆಯ ವ್ಯವಸ್ಥೆ ಮುಂತಾದವುಗಳ ಕುರಿತು ಪರಿಶೀಲನೆ ನಡೆಸಿದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ, ಅಪರ ಪೊಲೀಸ್ ಅಧೀಕ್ಷಕರಾದ ತಿಮ್ಮಯ್ಯ, ಗಂಗಾಧರ ಮತ್ತು ಮಂಡ್ಯ ತಹಶೀಲ್ದಾರ್ ವಿಶ್ವನಾಥ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Key words: Agriculture Fair, tomorrow, Mandya, DC, inspects, venue