ಸಿದ್ದರಾಮಯ್ಯ, ಡಿಕೆಶಿ ರಾಮಲಕ್ಷ್ಮಣರಂತೆ: ಬಿಹಾರದಲ್ಲಿ ಬಿಜೆಪಿ ಮತಗಳ್ಳತನದಿಂದ ಗೆದ್ದಿದೆ-MLC ಸಲೀಂ ಅಹ್ಮದ್

ಬೀದರ್,ಡಿಸೆಂಬರ್,4,2025 (www.justkannada.in):  ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ರಾಮಲಕ್ಷ್ಮಣರಂತಿದ್ದಾರೆ. ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ವಿಧಾನಪರಿಷತ್ ಸದಸ್ಯ ಸಲೀಂ ಅಹ್ಮದ್ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಲೀಂ ಅಹ್ಮದ್,  ಕಾಂಗ್ರೆಸ್ ನಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ . ಕಾಂಗ್ರೆಸ್ ನಲ್ಲಿ ದೊಡ್ಡಮಟ್ಟದ ಹೈಕಮಾಂಡ್ ಇದೆ ಬಿಜೆಪಿ ರೀತಿ ಇಲ್ಲ ಬಿಜೆಪಿಯಲ್ಲಿ ಮೋದಿ ಅಮಿತ್ ಶಾ ಮಾತ್ರ . ನಮ್ಮಲ್ಲಿ ಬಹಳ ಜನ ಇದ್ದಾರೆ ಎಂದರು.

ಅಧಿವೇಶನದಲ್ಲಿ ನಮ್ಮ ಅಭಿವೃದ್ದಿ ಬಗ್ಗೆ  ತೋರಿಸುತ್ತೇವೆ. ನಮ್ಮಲ್ಲಿ ಯಾವುದೇ ಕ್ರಾಂತಿ ಇಲ್ಲ ಹೈಕಮಂಡ್ ನಿರ್ಣಯ  ಅಂತಿಮ. ಚುನಾವಣಾ ಆಯೋಗ ಬಿಜೆಪಿ ಕಂಟ್ರೋಲ್ ನಲ್ಲಿದೆ.  ಎಲ್ಲಾ ರಾಜ್ಯಗಳಲ್ಲೂ ಮತಗಳ್ಳತನ ಮಾಡಿ ಬಿಜೆಪಿ ಗೆಲ್ಲುತ್ತಿದೆ. ಬಿಹಾರ ರಾಜ್ಯದಲ್ಲಿ 60 ಲಕ್ಷ ಮತ ಕಳ್ಳತನ ಮಾಡಿ ಬಿಜೆಪಿ ಗೆದ್ದಿದೆ ಎಂದು ಸಲೀಂ ಅಹ್ಮದ್  ಆರೋಪಿಸಿದರು.

Key words: Siddaramaiah, DK Shivakumar, Rama lakshmana, MLC, Salim Ahmed