ಹಸ್ತಪ್ರತಿಗಳ ಸಂರಕ್ಷಣೆ, ಡಿಜಿಟಲೀಕರಣ: ವಿವರ, ಮಾಹಿತಿ ನೀಡುವಂತೆ ವಿವಿಗಳಿಗೆ CS ಶಾಲಿನಿ ರಜನೀಶ್  ಸೂಚನೆ

ಬೆಂಗಳೂರು,ಡಿಸೆಂಬರ್,4,2025 (www.justkannada.in): ತಮ್ಮ ವಿಶ್ವವಿದ್ಯಾನಿಲಯದ ವ್ಯಾಪ್ತಿಯ ಶೈಕ್ಷಣಿಕ ಸಂಸ್ಥೆಗಳು ಹಾಗೂ ವಸ್ತುಸಂಗ್ರಹಾಲಯಗಳ ಸಂಗ್ರಹದಲ್ಲಿರುವ ಹಸ್ತಪ್ರತಿಗಳ ವಿವರಗಳನ್ನು ಮತ್ತು ಇವುಗಳ ಸಂರಕ್ಷಣೆ ಮತ್ತು ಡಿಜಿಟಲೀಕರಣಗೊಳಿಸುವ ಮತ್ತು ಡಿಜಿಟಲೀಕರಣಗೊಳಿಸಿರುವ ಮಾಹಿತಿಯನ್ನು ಕಛೇರಿಗೆ ಕಳುಹಿಸಿ ಕೊಡುವಂತೆ ಎಲ್ಲಾ ವಿವಿಗಳಿಗೆ ರಾಜ್ಯ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸೂಚನೆ ನೀಡಿದ್ದಾರೆ.

ಈ ಸಂಬಂಧ ರಾಜ್ಯದ ವಿವಿಗಳಿಗೆ ಸೂಚಿಸಿರುವ ಸಿಎಸ್ ಡಾ. ಶಾಲಿನಿ ರಜನೀಶ್, ಭಾರತ ದೇಶಾದ್ಯಂತ ಲಭ್ಯವಿರುವ ಶತಮಾನಗಳಷ್ಟು ಹಳೆಯ ಕೈಬರಹದ ಪಠ್ಯಗಳು, ಹಸ್ತಪ್ರತಿಗಳು ಮತ್ತು ದಾಖಲೆಗಳನ್ನು ಸಮೀಕ್ಷೆಯನ್ನು ಕೈಗೊಂಡು ಇವುಗಳ ಇಂದಿನ ತಂತ್ರಜ್ಞಾನ ಮೂಲಕ ಇವುಗಳ ಸಂರಕ್ಷಣೆ ಮತ್ತು ಡಿಜಿಟಲೀಕರಣಗೊಳಿಸುವ ಮೂಲಕ ಭವಿಷ್ಯದ ಪೀಳಿಗೆಗೆ ಅವುಗಳ ಜ್ಞಾನ ಸಂಪತ್ತಿನ ಸಂರಕ್ಷಣೆ ಮತ್ತು ಬಳಕೆಗೆ ಪರಂಪರೆ ಮತ್ತು ಹಸ್ತಪ್ರತಿಗಳ ಸಂರಕ್ಷಣೆ ಹಾಗೂ ಡಿಜಿಟಲೀಕರಣ ಯೋಜನೆಗಳನ್ನು ಹಮ್ಮಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಪ್ರಧಾನ ಮಂತ್ರಿಗಳ ಅಧ್ಯಕ್ಷತೆಯಲ್ಲಿ 5ನೇ ಮುಖ್ಯ ಕಾರ್ಯದರ್ಶಿಗಳ ಸಮ್ಮೇಳನದಲ್ಲಿ ಈ ವಿಷಯವಾಗಿ ಚರ್ಚಿಸಲಿದ್ದು, ಈ ನಿಟ್ಟಿನಲ್ಲಿ ರಾಜ್ಯದಲ್ಲಿರುವ ಹಸ್ತಪ್ರತಿಗಳ ಸಂರಕ್ಷಣೆ ಮತ್ತು ಡಿಜಿಟಲೀಕರಣ ಕುರಿತಂತೆ ಮಾಹಿತಿಗಳನ್ನು ನೀಡುವಂತೆ ಕೋರಿದ್ದಾರೆ.

ಹಸ್ತಪ್ರತಿಗಳು ಹಳೆಯ ಕನ್ನಡ, ತುಳು, ಮೋದಿ (ತಿಗಳಾರಿ), ದೇವನಾಗರಿ ಮತ್ತು ಉರ್ದು ಸಂಸ್ಕೃತ, ತೆಲುಗು, ಪರ್ಷಿಯನ್, ಇಂಗ್ಲಿಷ್ ಮತ್ತು ಸಂಸ್ಕೃತ ಭಾಷೆಗಳಲ್ಲಿ ಕಂಡುಬರುತ್ತವೆ. ಹಸ್ತಪ್ರತಿ ಸಂರಕ್ಷಣೆ ಮತ್ತು ಡಿಜಿಟಲೀಕರಣವು ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸುವ ಎರಡು ಪೂರಕ ಪ್ರಕ್ರಿಯೆಗಳಾಗಿದ್ದು, ಈ ಅಮೂಲ್ಯ ಪರಂಪರೆಯನ್ನು ಸಂರಕ್ಷಿಸುವುದು ನಮ್ಮೆಲ್ಲರ ಹೊಣೆಯಾಗಿದೆ. ಹಸ್ತಪ್ರತಿಗಳ ಸಂರಕ್ಷಣೆಯು ಲ್ಯಾಮಿನೇಷನ್, ಆಮ್ಲೀಕರಣವನ್ನು ಕಡಿಮೆ ಮಾಡುವುದು ಮತ್ತು ಪರಿಸರ ನಿಯಂತ್ರಣಗಳಂತಹ ತಂತ್ರಗಳನ್ನು ಬಳಸಿಕೊಂಡು ಭೌತಿಕ ಸಂರಕ್ಷಣೆಯನ್ನು ಒಳಗೊಂಡಿರುತ್ತದೆ.

ಡಿಜಿಟಲೀಕರಣವು ವ್ಯಾಪಕ ಪ್ರವೇಶ, ಹುಡುಕಾಟ ಮತ್ತು ದೀರ್ಘಕಾಲೀನ ಸಂಗ್ರಹಣೆಗಾಗಿ  ಡಿಜಿಟಲ್ ಪ್ರತಿಗಳನ್ನು ಸೃಷ್ಟಿಸುತ್ತದೆ, ಭೌತಿಕ ನಿರ್ವಹಣೆಯಿಂದ ದುರ್ಬಲವಾದ ಮೂಲಗಳನ್ನು ರಕ್ಷಿಸುತ್ತದೆ. ನಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಒಂದೇ ರಾಷ್ಟ್ರೀಯ ವೇದಿಕೆಯ ಮೂಲಕ ಸಾರ್ವಜನಿಕ ಪ್ರವೇಶವನ್ನು ಒದಗಿಸುವ ಸಲುವಾಗಿ ಡಿಜಿಟಲೀಕರಣಗೊಳಿಸಲು ಮತ್ತು ಸಂಯೋಜಿಸಲು ಕೇಂದ್ರ ಸಂಸ್ಕೃತಿ ಸಚಿವಾಲಯವು ಸಮಗ್ರ ಯೋಜನೆಯನ್ನು ರೂಪಿಸುತ್ತಿದ್ದು, ಪ್ರಾಚೀನ ಹಸ್ತಪ್ರತಿಗಳ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅವುಗಳ ಜ್ಞಾನವನ್ನು ಶಾಶ್ವತವಾಗಿ ಉಳಿಸಲು ಹಸ್ತಪ್ರತಿಗಳ ಸಂರಕ್ಷಣೆ ಮತ್ತು ಡಿಜಿಟಲೀಕರಣ ಅಗತ್ಯವಾಗಿದೆ ಎಂದು ಸಿಎಸ್  ಶಾಲಿನಿ ರಜನೀಶ್ ತಿಳಿಸಿದ್ದಾರೆ.

ಈ ನಿಟ್ಟಿನಲ್ಲಿ ತಮ್ಮ ವಿಶ್ವವಿದ್ಯಾನಿಲಯದ ವ್ಯಾಪ್ತಿಯ ಶೈಕ್ಷಣಿಕ ಸಂಸ್ಥೆಗಳು ಹಾಗೂ ವಸ್ತುಸಂಗ್ರಹಾಲಯಗಳ ಸಂಗ್ರಹದಲ್ಲಿರುವ ಹಸ್ತಪ್ರತಿಗಳನ್ನು ವಿವರಗಳನ್ನು ಮತ್ತು ಇವುಗಳ ಸಂರಕ್ಷಣೆ ಮತ್ತು ಡಿಜಿಟಲೀಕರಣಗೊಳಿಸುವ ಮತ್ತು ಡಿಜಿಟಲೀಕರಣಗೊಳಿಸಿರುವ ಮಾಹಿತಿಯನ್ನು ಈ ಕಛೇರಿಗೆ ಕಳುಹಿಸಿಕೊಡಬೇಕು ಎಂದು ಸಿಎಸ್ ಶಾಲಿನಿ ರಜನೀಶ್ ತಿಳಿಸಿದ್ದಾರೆ.

Key words: Preservation, digitization, manuscripts, CS, Shalini Rajneesh