ರಾಜ್ಯ ಬಿಜೆಪಿ ಉಸ್ತುವಾರಿ ಭೇಟಿ ಮಾಡಿ ನಮ್ಮ ಅಹವಾಲು ನೀಡಿದ್ದೇವೆ- ಕುಮಾರ್ ಬಂಗಾರಪ್ಪ

ನವದೆಹಲಿ,ಡಿಸೆಂಬರ್,4,2025 (www.justkannada.in):  ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ದಾಸ್ ಅವರನ್ನ ಭೇಟಿಯಾಗಿ ನಮ್ಮ  ಅಹವಾಲು ಕೊಟ್ಟಿದ್ದೇವೆ ಎಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ತಿಳಿಸಿದ್ದಾರೆ.

ದೆಹಲಿಗೆ ತೆರಳಿರುವ ಬಿಜೆಪಿ ರೆಬಲ್ಸ್ ಟೀಮ್ ಕಳೆದ ಎರಡು ದಿನಗಳಿಂದಲೂ ದೆಹಲಿಯಲ್ಲೇ ಬೀಡುಬಿಟ್ಟಿದೆ ಎನ್ನಲಾಗಿದ್ದು ಇಂದು  ಭೇಟಿ ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ದಾಸ್ ಅವರನ್ನ ಭೇಟಿಯಾಗಿದ್ದಾರೆ.

ಬಳಿಕ ಮಾಧ್ಯಮಗಳ ಜೊತೆ ಮಾತನಾಡಿರುವ ಕುಮಾರ್ ಬಂಗಾರಪ್ಪ, ರಾಜ್ಯ ಬಿಜೆಪಿ ಉಸ್ತುವಾರಿ ರಾಧಾಮೋಹನ್ ದಾಸ್ ಭೇಟಿಯಾಗಿ ವಾಲ್ಮಿಕಿ ನಿಗಮ ಹಗರಣ,  ವಕ್ಫ್ ಹೋರಾಟದ ಬಗ್ಗೆ  ಮಾಹಿತಿ  ತಿಳಿಸಿದ್ದೇವೆ. . ಮೆಕ್ಕೆಜೋಳ ಬೆಳೆಗಾರರ ಸಮಸ್ಯೆ ಬಗ್ಗೆಯೂ ಮಾತನಾಡಿದ್ದೇವೆ ಎಂದು ತಿಳಿಸಿದರು.

Key words: state BJP in-charge, our, demands, Kumar Bangarappa