ಮಂಗಳೂರು,ಡಿಸೆಂಬರ್,3,2025 (www.justkannada.in): ನಾರಾಯಣಗುರುಗಳು ಸಮಾನತೆ ಸಾರಿದ್ದಾರೆ. ಸಮಾಜದಲ್ಲಿ ಅಸಮಾನತೆ ಹೋಗದೆ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ನುಡಿದರು.
ದಕ್ಷಿಣ ಕನ್ನಡ ಜಿಲ್ಲೆ ಕೊಣಾಜೆಯಲ್ಲಿನ ಮಂಗಳೂರು ವಿವಿಯಲ್ಲಿಆಯೋಜಿಸಿರುವ ನಾರಾಯಣಗುರು- ಗಾಂಧಿ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಾರಾಯಣ ಗುರುಗಳು ಒಂದೇ ಜಾತಿ ಒಂದೇ ಧರ್ಮಅಂತಾ ಸಾರಿದವರು. ನೀವೇ ದೇವಾಲಯ ನಿರ್ಮಿಸಿಕೊಳ್ಳಿ ನೀವೇ ಪೂಜಾರಿ ಆಗಿ ಎಂದರು. ನಾರಾಯಣಗುರುಗಳು ಒಂದು ಉದಾಹರಣೆ ನೀಡುತ್ತಾರೆ. ಒಂದು ಮಾವಿನ ಮರ ತೋರಿಸಿ ಮಾವಿನ ಮರದ ಎಲೆಗಳು ಬೇರೆ ಬೇರೆ ಆಕಾರ ಇರುತ್ತದೆ ಅದರೆ ಅದರ ರಸದ ರುಚಿ ಒಂದೇ ಆಗಿರುತ್ತದೆ ಎಂದು ಹೇಳಿದರು. ಸಮಾಜದಲ್ಲಿ ಅಸಮಾನತೆ ಹೋಗದೆ ಅಭಿವೃದ್ದಿ ಸಾಧ್ಯವಿಲ್ಲ ಸಾಧ್ಯವಿಲ್ಲ ಎಲ್ಲರೂ ಸಾಮಾಜಿಕವಾಗಿ ಸಬಲರಾಗಬೇಕು ಜಾತಿವ್ಯವಸ್ಥೆ ಜಡದಿಂದ ಕೂಡಿದೆ. ಇಂದೂ ಅದರ ಅಸ್ತಿತ್ವ ಇದೆ ಎಂದು ಹೇಳಿದರು.
ಕೇರಳ ಒಂದು ಹುಚ್ಚರ ಸಂತೆ ಎಂದು ವಿವೇಕಾನಂದರು ಹೇಳುತ್ತಾರೆ. ಯಾಕೆಂದರೆ ಅಲ್ಲಿದ್ದ ಜಾತಿ ವ್ಯವಸ್ಥೆ ಕಂಡು ಬೇಸರದಿಂದ ಹೇಳುತ್ತಾರೆ. ಇದು ಕೇರಳಕ್ಕೆ ಸೀಮಿತಾಗಿಲ್ಲ ದೇಶಕ್ಕೆ ಹಬ್ಬಿದೆ. ಹುಟಟಿನಿಂದ ಯಾರು ಶ್ರೇಷ್ಠರಲ್ಲ ಎಂದು ನಾರಾಯಣ ಗುರು ಹೇಳಿದ್ದರು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
Key words: Narayanaguru-Gandhi Centenary, inequality, society, CM Siddaramaiah







