ಸಿಎಂ, ಡಿಸಿಎಂ ಬ್ರೇಕ್ ಫಾಸ್ಟ್ ಮೀಟಿಂಗ್: ಬಿಜೆಪಿ ಟೀಕೆಗೆ ಸಚಿವ ಭೈರತಿ ಸುರೇಶ್ ಕಿಡಿ

ಬೆಂಗಳೂರು,ಡಿಸೆಂಬರ್,2,2025 (www.justkannada.in):  ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಬ್ರೇಕ್ ಫಾಸ್ಟ್ ಮೀಟೀಂಗ್ ಬಗ್ಗೆ ಟೀಕಿಸಿದ ಬಿಜೆಪಿ ನಾಯಕರ ವಿರುದ್ದ ನಗರಾಭಿವೃದ್ದಿ ಇಲಾಖೆ ಸಚಿವ ಭೈರತಿ ಸುರೇಶ್ ಕಿಡಿಕಾರಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ಭೈರತಿ ಸುರೇಶ್, ಸಿಎಂ ಮತ್ತು ಡಿಸಿಎಂ ಬ್ರೇಕ್ ಫಾಸ್ಟ್ ಮಾಡಿದರೇ  ತಪ್ಪೇನು. ನಮ್ಮ ಪಕ್ಷದವರ ಮನೆ ಊಟ ಮಾಡಿದ ತಪ್ಪೇನು?   ಬಿಜೆಪಿ ಜೆಡಿಎಸ್ ಮನೆಗೆ ಹೋಗಿ ಉಪಹಾರ ಸೇವಿಸಿದ್ರೆ ಚರ್ಚೆ ಮಾಡಬೇಕಾಗಿತ್ತು. ಆದರೆ  ನಮ್ಮವರ ಮನೆಗೆ ಹೋಗಿ ಉಪಹಾರ ಸೇವಿಸಿದರೇ ತಪ್ಪೇನು  ಈ ರೀತಿ ಊಟೋಪಚಾರ ನೂರು ಬಾರಿ ನಡೆದಿದೆ ಎಂದು ಬಿಜೆಪಿ ನಾಯಕರಿಗೆ ಟಾಂಗ್ ಕೊಟ್ಟರು.

Key words: CM, DCM, breakfast meeting, Minister, Bhairati Suresh, BJP