ಕೋಲಾರ,ಡಿಸೆಂಬರ್,2,2025 (www.justkannada.in): ತಮ್ಮ ಪಕ್ಷದ ರೆಬಲ್ ನಾಯಕರು ದೆಹಲಿ ಪ್ರವಾಸ ಕೈಗೊಂಡ ಹಿನ್ನೆಲೆಯಲ್ಲಿ ಈ ಕುರಿತು ಮಾತನಾಡಿರುವ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಟಾಂಗ್ ಕೊಟ್ಟಿದ್ದಾರೆ.
ಈ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ನರಿ ಕೂಗು ಗಿರಿ ಮುಟ್ಟಲ್ಲ ಎಂಬ ಮಾತಿದೆ. ಹಾಗೆಯೇ ರೆಬಲ್ ನಾಯಕರು ದೆಹಲಿಗೆ ಹೋಗಿ ಏನು ಮಾಡುತ್ತಾರೆ? ಏನೋ ಕೆಲಸಕ್ಕೆ ಹೋಗಿರಬೇಕಷ್ಟೇ ಹೋಗಲಿ ಬಿಡಿ. ನಾವು ಹೋಗಬೇಡ ಎಂದು ಹೇಳೋಕೆ ಆಗುತ್ತಾ? ಎಂದರು.
ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ ಅವರು ಏನು ಮಾಡ್ತಾರೆ? ಅವರು ಹತ್ತೋಕೆ ಆಗುತ್ತಾ? ಆಗಲ್ಲ. ಯಾರಿಗೆ ಹೆಚ್ಚು ಜನ ಬೆಂಬಲವಿದೆಯೋ ಅವರಿಗೆ ಹೈಕಮಾಂಡ್ ನಾಯಕರು ಅಧಿಕಾರ ಕೊಡುತ್ತಾರೆ. ವಿಜಯೇಂದ್ರ ಅಧ್ಯಕ್ಷರಾಗಿರುವುದರಿಂದ ಯಾವುದೇ ಸಮಸ್ಯೆ ಇಲ್ಲ ಎಂದು ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.
Key words: BJP, Rebel leaders, Chalavadi Narayanaswamy







