ಬೆಂಗಳೂರು,ಡಿಸೆಂಬರ್,2,2025 (www.justkannada.in): ಅಗತ್ಯವಿದ್ದರೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅವರನ್ನ ನಮ್ಮ ಮನೆಗೂ ಬ್ರೇಕ್ ಫಾಸ್ಟ್ ಗೆ ಕರೆಯುತ್ತೇನೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಡಿಸಿಎಂ ಡಿಕೆ ಶಿವಕುಮಾರ್ , ಸಿಎಂ ಸಿದ್ದರಾಮಯ್ಯ ಬ್ರೇಕ್ ಫಾಸ್ಟ್ ಮೀಟಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ಇಬ್ಬರನ್ನೂ ನನ್ನ ಮನೆಗೆ ಬ್ರೇಕ್ ಫಾಸ್ಟ್ ಗೆ ಯಾಕೆ ಕರೆಯಬಾರದು. ಪಕ್ಷದಲ್ಲಿ ಎಲ್ಲವೂ ತಿಳಿಯಾಗಿದೆ, ಖುಷಿಯ ವಾತಾವರಣವಿದೆ. ಸಿಎಂ, ಡಿಸಿಎಂ ಬ್ರೇಕ್ ಪಾಸ್ಟ್ ಗೆ ನನ್ನನ್ನ ಕರೆದಿಲ್ಲ. ನನ್ನನ್ನೂ ಕರೆದಿದ್ದರೇ ಹೋಗುತ್ತಿದ್ದೆ ಎಂದರು.
ಪರಮೇಶ್ವರ್ ಸಿಎಂ ಆಗಲಿ ಎಂದು ಅಭಿಮಾನಿಗಳು ಮುಡಿ ಕೊಟ್ಟ ವಿಚಾರ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ್, ಎಲ್ಲಾ ನಾಯಕರ ಅಭಿಮಾನಿಗಳಿಗೆ ಸಿಎಂ ಆಗಲಿ ಅಂತಾ ಆಸೆ ಇರುತ್ತೆ. ತಮ್ಮ ನಾಯಕರು ಸಿಎಂ ಆಗಲಿ ಎಂಬ ಆಸೆ ಇರುತ್ತೆ ಹಾಗೆಯೇ ನನ್ನ ಅಭಿಮಾನಿಗಳಲ್ಲೂ ಆಸೆ ಇದೆ ಎಂದರು.
Key words: I will, invite, breakfast, CM, DCM, Home Minister, Parameshwar







