ಮೈಸೂರು, ಡಿಸೆಂಬರ್, 1,2025 (www.justkannada.in): ಮರುಣಾಕ್ಷೇತ್ರ ಅಭಿವೃದ್ದಿಯಲ್ಲಿ ರಾಜ್ಯಕ್ಕೆ ಮಾದರಿ ಕ್ಷೇತ್ರವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಡಾ. ಯಾತೀಂದ್ರ ಸಿದ್ದರಾಮಯ್ಯ ತಿಳಿಸಿದರು.
ವರುಣ ಕ್ಷೇತ್ರದ ಪುಟ್ಟೇಗೌಡನ ಹುಂಡಿಯಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಸಿ.ಎಸ್.ಆರ್. ನಿಧಿಯಡಿ ನಿರ್ಮಿಸಲಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 3 ಹೆಚ್ಚುವರಿ ಶಾಲಾ ಕೊಠಡಿಗಳನ್ನು ಉದ್ಘಾಟನೆ ಮಾಡಿ ಮಾತನಾಡಿದ ಎಂಎಲ್ ಸಿ ಯತೀಂದ್ರ ಸಿದ್ದರಾಮಯ್ಯ ಅವರು, ಪುಟ್ಟೇಗೌಡನ ಹುಂಡಿ ಹಾಗೂ ಚಟ್ನಳ್ಳಿ ಗ್ರಾಮಗಳಲ್ಲಿ 45 ಲಕ್ಷದಲ್ಲಿ ಕೊಠಡಿ ನಿರ್ಮಾಣ, ಕೀಳನಪುರದಲ್ಲಿ 30 ಲಕ್ಷಗಳಲ್ಲಿ 2 ಕೊಠಡಿ, ಕೆಂಪೇಗೌಡನ ಹುಂಡಿಯಲ್ಲಿ 15 ಲಕ್ಷದಲ್ಲಿ 1 ಕೊಠಡಿ, ಮೆಲ್ಲಹಳ್ಳಿಯಲ್ಲಿಯು ಕೊಠಡಿ ನಿರ್ಮಾಣದ ಜೊತೆಗೆ ಶೌಚಾಲಯ ನಿರ್ಮಾಣಕ್ಕೆ ಗುದ್ದಲ್ಲಿ ಪೂಜೆ ಮಾಡಿದೇವೆ. ಈ ಹಿಂದೆ ಶಾಲಾ ಕೊಠಡಿಗಳ ನಿರ್ಮಾಣಕ್ಕೆ 11.5 ಕೋಟಿ ಹಣ ಕೊಟ್ಟಿದ್ದೆವು, ನಮ್ಮ ಸರ್ಕಾರ ಬಂದ ಮೇಲೆ ವರುಣಾ ಕ್ಷೇತ್ರದಲ್ಲಿಎಲ್ಲಾ ಗ್ರಾಮಗಳಲ್ಲಿಯೂ ಶಾಲಾ ಕೊಠಡಿಗಳ ಕೊರತೆ ಇಲ್ಲದ ಹಾಗೆ ಸಿ,ಎಸ್.ಆರ್. ನಿಧಿಯಡಿ ಕೊಠಡಿಗಳನ್ನು ನಿರ್ಮಾಣ ಮಾಡುತಿದ್ದೇವೆ. ಪೋಷಕರು ಮಕ್ಕಳನ್ನು ಹೆಚ್ಚು ವಿದ್ಯಾವಂತರನ್ನಾಗಿ ಮಾಡಿ, ಶಿಕ್ಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕುಎಂದಅವರು ಮರುಣಾ ಕ್ಷೇತ್ರ ಜನರ ಋಣ ತೀರಿಸಲು ಸಾಧ್ಯವಿಲ್ಲ ಎಂದರು.
ಈ ಸಂದರ್ಭದಲ್ಲಿ ಡಿ.ಡಿ.ಪಿ. ಐಉದಯ್ ಕುಮಾರ್, ತಹಶೀಲ್ದಾರ್ ಮಹೇಶ್ ಕುಮಾರ್, ಇ.ಓ. ಕೃಷ್ಣ, ಬಿ.ಇ.ಓ ಪ್ರಕಾಶ್, ಗ್ರಾಪಂ. ಅಧ್ಯಕ್ಷ ನಂಜುಂಡಸ್ವಾಮಿ, ಮಹದೇವಪ್ಪ, ಎ.ಪಿ.ಎಂ.ಸಿ. ಮಾಜಿಅಧ್ಯಕ್ಷ ಬೀರೆಗೌಡ, ತಾ,ಪಂ, ಮಾಜಿ ಸದಸ್ಯರಾದ ಮಹದೇವಪ್ಪಎಂ.ಟಿ. ರವಿಕುಮಾರ್ ಜಿ.ಕೆ. ಬಸವಣ್ಣ, ಸಿದ್ದರಾಮೇಗೌಡ, ಆಪ್ತ ಸಹಾಯಕ ಶಿವಸ್ವಾಮಿ ಪ್ರದೀಪ್ ಕುಮಾರ್, ನಾಗರಾಜ್, ಗ್ರಾಮಸ್ಥರು ಹಾಜರಿದ್ದರು.
Key words: Varuna, model, state, MLC, Dr. Yathindra Siddaramaiah







