ದಾವಣಗೆರೆ,ಡಿಸೆಂಬರ್,1,2025 (www.justkannada.in): ಮುಖ್ಯಮಂತ್ರಿ ಸ್ಥಾನದಲ್ಲಿ ಸಿದ್ದರಾಮಯ್ಯ ಗಟ್ಟಿಯಾಗಿದ್ದಾರೆ. ಬದಲಾವಣೆ ವಿ
ಷಯ ಪಕ್ಷದ ಮುಂದೆ ಇಲ್ಲ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ ಮಹದೇವಪ್ಪ ತಿಳಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಹೆಚ್.ಸಿ ಮಹದೇವಪ್ಪ, ಸಿಎಂ ಆಗಿ ಸಿದ್ದರಾಮಯ್ಯ ಇದ್ದಾರೆ ಅವರೇ ಮುಂದುವರೆಯುತ್ತಾರೆ. ಸಿಎಂ ಸ್ಥಾನದಲ್ಲಿ ಸಿದ್ದರಾಮಯ್ಯ ಗಟ್ಟಿಯಾಗಿರುತ್ತಾರೆ. ಬದಲಾವಣೆ ವಿಷಯ ಪಕ್ಷದ ಮುಂದೆ ಇಲ್ಲ. ಅಂತೆ ಕಂತೆ ಮಾತೇಕೆ? ಯಾವುದೇ ಗೊಂದಲ ಇರಬಾರದೆಂದು ಸಿಎಂ, ಡಿಸಿಎಂ ಬ್ರೇಕ್ ಫಾಸ್ಟ್ ನಡೆಸಿದ್ದಾರೆ. ಹೈಕಮಾಂಡ್ ಹೇಗೆ ಹೇಳುತ್ತೋ ಹಾಗೆ ಸರ್ಕಾರ ನಡೆಸುತ್ತೇವೆ ಎಂದರು.
2028ಕ್ಕೆ ಮತ್ತೊಮ್ಮೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಕ್ರಿಕೆಟ್ ಆಡೋದು 11 ಜನ. ಉಳಿದವರು ಬ್ಯಾಟ್ ಬೀಸಿದರೆ ಪ್ರಯೋಜವಿಲ್ಲ. ಸ್ವಾಮೀಜಿಗಳು ಸೇರಿ ಯಾರೇ ಬ್ಯಾಟ್ ಬೀಸಲಿ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ನಮ್ಮ ಸರ್ಕಾರ ಸ್ಥಿರ ಸಿಎಂ ಮುಂದುವರಿಕೆಯಲ್ಲಿ ಯಾವ ಸಂದೇಹ ಇಲ್ಲ. ಸಿದ್ದರಾಮಯ್ಯ ಮುಂದುವರೆಯುತ್ತಾರೆ ಎಂದು ಹೆಚ್ ಸಿ ಮಹದೇವಪ್ಪ ತಿಳಿಸಿದರು.
Key words: Siddaramaiah, CM, No change, Minister, H.C. Mahadevappa







