ನಾನು ಮತ್ತು ಸಿಎಂ ಸಿದ್ದರಾಮಯ್ಯ ಬ್ರದರ್ಸ್ ರೀತಿ ಕೆಲಸ ಮಾಡ್ತಿದ್ದೇವೆ- ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರು,ಡಿಸೆಂಬರ್,1,2025 (www.justkannada.in):  ನಮ್ಮಲ್ಲಿ ಯಾವುದೇ ಗುಂಪುಗಳಿಲ್ಲ. ನಾನು ಮತ್ತು ಸಿಎಂ ಸಿದ್ದರಾಮಯ್ಯ ಬ್ರದರ್ಸ್ ರೀತಿ ಕೆಲಸ ಮಾಡುತ್ತಿದ್ದೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ನಾನು ಸಿಎಂ ಕಾಂಗ್ರೆಸ್ ನಲ್ಲಿ ಬ್ರದರ್ಸ್ ರೀತಿ ಇದ್ದೇವೆ.  ನಿಮ್ಮ ಒತ್ತಡಕ್ಕೆ ಬ್ರೇಕ್ ಫಾಸ್ಟ್ ಅಗತ್ಯವಿಲ್ಲ.  ಬ್ರೇಕ್ ಫಾಸ್ಟ್ ಸಭೆ ನಮ್ಮಿಬ್ಬರಿಗೆ ಸಂಬಂಧಿಸಿದ್ದಾಗಿದೆ.   ಸಿದ್ದರಾಮಯ್ಯ ಗುಂಪು ನನ್ನ ಗುಂಪು ಅಂತೇನಿಲ್ಲ. ಎಲ್ಲರೂ ಒಟ್ಟಿಗೆ ಕೆಲಸ ಮಾಡುತ್ತಿದ್ದೇವೆ ಎಂದರು.

ನಮ್ಮ ನಾಯಕರಿಗೆ ಕೇಂದ್ರದಿಂದ ಕಿರುಕುಳವಾಗುತ್ತಿದೆ. ಹೆರಾಲ್ಡ್ ಪ್ರಕರಣ ಮುಂದಿಟ್ಟುಕೊಂಡು ಟಾರ್ಗೆಟ್ ಮಾಡಲಾಗುತ್ತಿದೆ. ಇದೊಂದು ರಾಜಕೀಯ ಕಿರುಕುಳ. ನಮ್ಮ ನಾಯಕರು ಹೆದರಲ್ಲ ಎದರಿಸುತ್ತಾರೆ ಎಂದು ಡಿಕೆ ಶಿವಕುಮಾರ್ ಹೇಳಿದರು.

Key words: CM, Siddaramaiah, brothers, DCM, DK Shivakumar