‘PHD’ ಪದವಿ ನೀಡದ ಆರೋಪ : ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ

ಬೆಳಗಾವಿ,ಡಿಸೆಂಬರ್,1,2025 (www.justkannada.in): ಪಿಎಚ್ ಡಿ ಪದವಿ ನೀಡಿಲ್ಲ ಎಂದು ಆರೋಪಿಸಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಳಗಾವಿಯ ಚಿಕ್ಕೋಡಿ ಪಟ್ಟಣದಲ್ಲಿ ನಡೆದಿದೆ.

ಸುಜಾತ ಬೆಂಡೆ (32) ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ.  ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ  ರಾಣಿ ಚೆನ್ನಮ್ಮ ವಿಶ್ವ ವಿದ್ಯಾಲಯ ಘಟಿಕೋತ್ಸವದಲ್ಲಿ ಪಿಎಚ್ ಡಿ  ಪದವಿ ಪ್ರದಾನ ಮಾಡಿಲ್ಲ ಎಂದು ಆರೋಪಿಸಿ  ಸುಜಾತ ಅಸ್ವಸ್ಥರಾಗಿದ್ದು  ವಿದ್ಯಾರ್ಥಿನಿಗೆ ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕುಲಪತಿ ಸಿಎಂ ತ್ಯಾಗರಾಜ್ ಕುಲಸಚಿವ ಸಂತೋಷ ಕಾಮೇಗೌಡ, ಗೈಡ್, ಕೆಎಲ್ ಎನ್ ಮೂರ್ತಿ ವಿರುದ್ಧ ಈ ಆರೋಪ ಕೇಳಿಬಂದಿದೆ. ರಾಯಭಾಗ ಪ್ರದೇಶದ ಸಮಗ್ರ ಚಾರಿತ್ರಿಕ ವಿಷಯದಲ್ಲಿ ಸಂಶೋಧನೆ ಮಾಡಿದ್ದ ವಿದ್ಯಾರ್ಥಿನಿ ಸುಜಾತ ಬೆಂಡೆ 6 ತಿಂಗಳ ಹಿಂದೆ ಇದನ್ನು ಸಲ್ಲಿಕೆ ಮಾಡಿದ್ದರು.

ಈ ನಡುವೆ ಟಾರ್ಗೆಟ್ ಮಾಡಿ ಪಿಎಚ್ ಡಿ ಪದವಿ ಕೊಡಲು ನಿರಾಕರಣೆ ಮಾಡಿದ್ದಾರೆ. ಗೈಡ್ ಮೂರ್ತಿ ಕಿರುಕುಳ ಬಗ್ಗೆ  ಕುಲಪತಿ, ಕುಲಸಚಿವರಿಗೆ ದೂರು ನೀಡಿದ್ದೆ. ದೂರು ನೀಡಿದ ನಂತರ ಸಮಸ್ಯೆ ಬಗೆಹರಿಸಲಾಗಿತ್ತು. ಈಗ ಟಾರ್ಗೆಟ್ ಮಾಡಿ ಪದವಿ ನೀಡುತ್ತಿಲ್ಲ ಎಂದು ಸುಜಾತ ಆರೋಪ ಮಾಡಿದ್ದಾರೆ.

Key words: Accused, PHD. Degree, Student, attempts, suicide