Wednesday, October 21, 2026

Dasara Wishes

Happy Dasara
Home Front Page MYSORE BEML; ಹುಲಿ ಪ್ರತ್ಯಕ್ಷ, ದೃಢಪಡಿಸಿದ ಪಗ್‌ ಮಾರ್ಕ್..!‌

MYSORE BEML; ಹುಲಿ ಪ್ರತ್ಯಕ್ಷ, ದೃಢಪಡಿಸಿದ ಪಗ್‌ ಮಾರ್ಕ್..!‌

The tiger, which used to be seen in the forest villages of the district, has now entered Mysore city. A video of a tiger crossing the city's Bemal company premises is proof of this. On Friday night, a BEML staff member was caught on camera crossing the road in a car. The tiger was seen crossing the road when the BEML staff was leaving after finishing work. The video was shot on a mobile phone while sitting inside the car. Later, it was given to the company's security officer.

 

ಮೈಸೂರು, ನ.೨೯, ೨೦೨೫: ಜಿಲ್ಲೆಯ ಕಾಡಂಚಿನ ಗ್ರಾಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಹುಲಿರಾಯ ಇದೀಗ ಮೈಸೂರು ನಗರಕ್ಕೆ ಎಂಟ್ರಿ ಪಡೆದಿದೆ. ನಗರದ ಬೆಮಲ್‌ ಕಂಪನಿ ಆವರಣದಲ್ಲಿ ಹುಲಿ ಸಂಚಾರದ ವಿಡಿಯೋ ಸೆರೆಯಾಗಿರುವುದೇ ಇದಕ್ಕೆ ಸಾಕ್ಷಿ.

ಶುಕ್ರವಾರ ರಾತ್ರಿ ಬೆಮಲ್‌ ಸಿಬ್ಭಂದಿ ಕಾರಿನಲ್ಲಿ ಸಂಚರಿಸುವ ವೇಳೆ ಬೃಹತ್‌ ಗಾತ್ರದ ಹುಲಿಯೊಂದು ರಸ್ತೆ ದಾಟುತ್ತಿರುವ ದೃಶ್ಯವನ್ನು ಮೊಬೈಲ್‌ ನಲ್ಲಿ ಸೆರೆ ಹಿಡಿಯಲಾಗಿದೆ. ಬೆಮಲ್‌ ಕಂಪನಿಯ ಸಿಬ್ಬಂದಿ ಕೆಲಸ ಮುಗಿಸಿಕೊಂಡು ಕಾರಿನಲ್ಲಿ ತೆರಳುವಾಗ ರಸ್ತೆಗೆ ಅಡ್ಡಲಾಗಿ ಹುಲಿ ಪ್ರತ್ಯಕ್ಷವಾಗಿದೆ. ಇದನ್ನುಕಾರಿನ ಒಳಗೆ ಕುಳಿತು ಮೊಬೈಲ್‌ ನಲ್ಲಿ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ. ಬಳಿಕ ಇದನ್ನು ಸಂಸ್ಥೆಯ ಸೆಕ್ಯೂರಿಟಿ ಅಧಿಕಾರಿಗೆ ನೀಡಿದ್ದಾರೆ.

ಹುಲಿ ಹೆಜ್ಜೆ ಪತ್ತೆ:

ವಿಡಿಯೋ ವೈರಲ್‌ ಬಳಿಕ ಸ್ಥಳಕ್ಕೆ ತೆರಳಿದ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಹುಲಿಗಾಗಿ ಹುಡುಕಾಡ ನಡೆಸಿದರು. ಈ ಬಗ್ಗೆ “ ಜಸ್ಟ್‌ ಕನ್ನಡ”  ಜತೆ ಮಾತನಾಡಿದ ಆರ್.ಎಫ್.ಒ ಸಂತೋಷ್‌ ಹೂಗಾರ್‌ ಹೇಳಿದಿಷ್ಟು..

ಹುಲಿ ರಸ್ತೆ ದಾಟುವ ವಿಡಿಯೋ ಲಭಿಸಿದ ಬಳಿಕ ಅರಣ್ಯ ಇಲಾಖೆ ಸಿಬ್ಬಂದಿಗಳ ಜತೆ ಸ್ಥಳಕ್ಕೆ ತೆರಳಿದೆವು. ಬೆಮಲ್‌ ಅಂದಾಜು ೫೦೦ ಎಕರೆ ಪ್ರದೇಶದಲ್ಲಿದೆ. ಜತೆಗೆ ದಟ್ಟ ಕಾಡಿನಿಂದ ಕೂಡಿದೆ. ಈ ಪ್ರದೇಶದಲ್ಲಿ ಕೆರೆ ಸಹ ಇದೆ. ಹಾಗಾಗಿ ಇದು ಅರಣ್ಯ ಪ್ರದೇಶವೆ ಆಗಿದೆ.  ವಿಶಾಲ ಪ್ರದೇಶ ಜತೆಗೆ ದಟ್ಟವಾದ ಮರಗಳಿಂದ ಕೂಡಿರುವ  ಜಾಗ. ಇಲ್ಲಿ ಹುಲಿ ಪತ್ತೆ ಸುಲಭದ ವಿಷಯವಲ್ಲ ಎಂದರು.

MYSORE BEML; ಹುಲಿ ಪ್ರತ್ಯಕ್ಷ, ದೃಢಪಡಿಸಿದ ಪಗ್‌ ಮಾರ್ಕ್..!‌ tiger

ಕಂಪನಿಯ ಆವರಣದಲ್ಲಿರುವ ಸಿಸಿಟಿವಿ ವಿಡಿಯೋ ಪರಿಶೀಲನೆ ನಡೆಸಲಾಗುತ್ತಿದೆ.  ಜತೆಗೆ ಹುಲಿಯ ಹೆಜ್ಜೆ ಗುರುತುಗಳು ಸಹ ಪತ್ತೆಯಾಗಿವೆ.  ಹಾಗಾಗಿ ಹುಲಿ ಇರುವಿಕೆ ದೃಢಪಟ್ಟಿದೆ. ಇಂದು ಕತ್ತಲಾವರಿಸಿದ ಕಾರಣ ಕಾರ್ಯಚರಣೆ ಸ್ಥಗಿತಗೊಳಿಸಲಾಯಿತು. ನಾಳೆ ಮತ್ತೆ  ಹುಲಿ ಪತ್ತೆ ಹಾಗೂ ಸೆರೆ ಕಾರ್ಯಚರಣೆ ಸಂಬಂಧ ಹಿರಿಯ ಅಧಿಕಾರಿಗಳು ನಿರ್ಧರಿಸುವರು ಎಂದು ಸಂತೋಷ್‌ ಹೂಗಾರ್‌ ವಿವರಿಸಿದರು.

ಹೆಣ್ಣುಲಿ..?

ಜಸ್ಟ್‌ ಕನ್ನಡ ಗೆ ಲಭಿಸಿದ ಮಾಹಿತಿಗಳ ಪ್ರಕಾರ, ಬೆಮಲ್‌ ಆವರಣದಲ್ಲಿ ಕಾಣಿಸಿಕೊಂಡಿರುವ ಹುಲಿ ಹೆಣ್ಣು ಹುಲಿ. ಇದು ಅಂದಾಜು  ಎರಡುವರೆ ವರ್ಷಗಳಿಂದ ಮೂರು ವರ್ಷಗಳದ್ದು ಎಂದು ತಿಳಿದು ಬಂದಿದೆ.

key words: MYSORE, BEML, Tiger sighted, confirmed, pug mark, DCF, ACF, RFO, Forest, Karnataka

MYSORE BEML jk02

SUMMARY:

MYSORE BEML; Tiger sighted, confirmed pug mark.

ಹುಲಿ ಪ್ರತ್ಯಕ್ಷ tiger tiger 1

The tiger, which used to be seen in the forest villages of the district, has now entered Mysore city. A video of a tiger crossing the city’s Bemal company premises is proof of this.

On Friday night, a BEML staff member was caught on camera crossing the road in a car. The tiger was seen crossing the road when the BEML staff was leaving after finishing work. The video was shot on a mobile phone while sitting inside the car. Later, it was given to the company’s security officer.