ಅಧಿಕಾರ ಹಂಚಿಕೆ ಗೊಂದಲ: ಜನರಿಗೆ ಪೂರಕವಾಗಿಯೇ ನಿರ್ಧಾರ ಬರುತ್ತೆ- ಬಿ.ಕೆ ಹರಿಪ್ರಸಾದ್

ಬೆಂಗಳೂರು,ನವೆಂಬರ್,28,2025 (www.justkannada.in):  ಅಧಿಕಾರ ಹಂಚಿಕೆ, ನಾಯಕತ್ವ ಬದಲಾವಣೆ ಗೊಂದಲ ಹಿನ್ನೆಲೆಯಲ್ಲಿ ಈ ಕುರಿತು ಪ್ರತಿಕ್ರಿಯಿಸಿರುವ ವಿಧಾನಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್, ಹೈಕಮಾಂಡ್ ಗಂಭೀರವಾಗಿ ಚರ್ಚಿಸಿ ಸೂಕ್ತ ನಿರ್ಧಾರ ಮಾಡುತ್ತದೆ ಎಂದಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಬಿ.ಕೆ ಹರಿಪ್ರಸಾದ್,  ಜನರಿಗೆ ಪೂರಕವಾಗಿಯೇ ನಮ್ಮ ನಿರ್ಧಾರ ಬರುತ್ತೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಿರೋದು ಕೇವಲ 140 ಶಾಸಕರಿಂದಷ್ಟೆ ಅಲ್ಲ. ಕಾಂಗ್ರೆಸ್ಸೇತರರಿಂದಲೂ ಅಧಿಕಾರಕ್ಕೆ ಬಂದಿರೋದು.

ಹೈಕಮಾಂಢ್ ಗೆ ನೋವಾಗದಂತೆ ನಡೆದುಕೊಳ್ಳಬೇಕು  ಕೇವಲ ನಾವೇ ಪಕ್ಷ ಗೆಲ್ಲಿಸಿದ್ದೀವಿ ಅನ್ನದು ಸುಳ್ಳು. ಎಂದು  ಬಿ.ಕೆ ಹರಿಪ್ರಸಾದ್ ತಿಳಿಸಿದರು.

Key words: Confusion, power sharing, Decisions, B.K. Hariprasad