ಶ್ರೀಕೃಷ್ಣಮಠದಲ್ಲಿ ಕೃಷ್ಣನ ದರ್ಶನ ಪಡೆದ ಪ್ರಧಾನಿ ಮೋದಿ: ಲಕ್ಷಕಂಠ ಗೀತಾ ಪಾರಾಯಣದಲ್ಲಿ ಭಾಗಿ

ಉಡುಪಿ,ನವೆಂಬರ್,28,2025 (www.justkannada.in):  ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಉಡುಪಿ ಪ್ರವಾಸ ಕೈಗೊಂಡಿದ್ದು ಇಲ್ಲಿನ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ಶ್ರೀಕೃಷ್ಣನ ದರ್ಶನ ಪಡೆದರು.

ಉಡುಪಿಗೆ ಆಗಮಿಸಿ ರೋಡ್ ಶೋ ಮೂಲಕ ಶ್ರೀಕೃಷ್ಣಮಠಕ್ಕೆ ಆಗಮಿಸಿದ ಪ್ರಧಾನಿ ಮೋದಿ ಕನಕದಾಸರ ಪುತ್ಥಳಿಗೆ ಪುಷ್ಪಾರ್ಚನೆ ಸಲ್ಲಿಸಿದರು. ನಂತರ ನವಗ್ರಹ ಕಿಂಡಿಯ ಮೂಲಕ ಶ್ರೀಕೃಷ್ಣನ ದರ್ಶನ ಪಡೆದರು.  ಮುಖ್ಯಪ್ರಾಣ ದೇವರು, ಗರುಡನ ದರ್ಶನ ಪಡೆದ ಪ್ರಧಾನಿ ಮೋದಿ ಅವರು  ಸ್ವರ್ಣಲೇಪಿತ ಕನಕನಕಿಂಡಿ  ಉದ್ಘಾಟಿಸಿದರು.

ನಂತರ ಮಠದಲ್ಲಿ ಪ್ರಧಾನಿ ಮೋದಿ ಲಕ್ಷಕಂಠ ಗೀತಾ ಪಾರಾಯಣದಲ್ಲಿ ಭಾಗಿಯಾದರು. ಈ ವೇಳೆ ಸುಗುಣೇಂದ್ರ ತೀರ್ಥ ಶ್ರೀಗಳು,  ಸುಶಿರೀಂದ್ರ ಶ್ರೀಗಳು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ,  ಸಚಿವ ಭೈರತಿ ಸುರೇಶ್, ಸಂಸದರಾದ ಕೋಟಾ ಶ್ರೀನಿವಾಸ ಪೂಜಾರಿ,  ಬಿ.ವೈ ರಾಘವೇಂಧ್ರ  ರಾಜ್ಯಸಭಾ ಸದಸ್ಯ  ಡಾ. ವಿರೇಂದ್ರೆ ಹೆಗ್ಗಡೆ ಶಾಸಕರಾದ ಸುನೀಲ್ ಕುಮಾರ್ ಸೇರಿ ಹಲವರು ಭಾಗಿ ಪಾಲ್ಗೊಂಡಿದ್ದರು.

Key words: PM Modi, Lord Krishna, Sri Krishna Math, Udupi