ಉಡುಪಿಯಲ್ಲಿ ಪ್ರಧಾನಿ ಮೋದಿ ಭರ್ಜರಿ ರೋಡ್ ಶೋ: ಕಿಕ್ಕಿರಿದು ಸೇರಿದ ಜನ

ಉಡುಪಿ,ನವೆಂಬರ್,28,2025 (www.justkannada.in):  ಪ್ರಧಾನಿ ನರೇಂದ್ರ ಮೋದಿ ಅವರು ಉಡುಪಿಗೆ ಭೇಟಿ ನೀಡಿದ್ದು ಭರ್ಜರಿ ರೋಡ್ ಶೋ ನಲ್ಲಿ ಭಾಗಿಯಾಗಿದ್ದಾರೆ.

ಮಂಗಳೂರಿಗೆ ಆಗಮಿಸಿ ಅಲ್ಲಿಂದ ಉಡುಪಿಗೆ ಸೇನಾವಾಹನದ ಮೂಲಕ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನ ಸಚಿವ ದಿನೇಶ್ ಗುಂಡೂರಾವ್  ಮತ್ತು ರಾಜ್ಯ ಬಿಜೆಪಿ ಸಹ ಉಸ್ತುವಾರಿ ಸುಧಾಕರ್ ರೆಡ್ಡಿ  ಶಾಸಕರಾದ ರಾಜೇಶ್ ನಾಯ್ಕ್ ಭಾಗೀರಥಿ ಮುರಳ್ಯ ಸ್ವಾಗತಿಸಿದರು.

ನಂತರ ಪ್ರಧಾನಿ ಮೋದಿ ಅವರು ವಾಹನದಲ್ಲಿ ಬನ್ನಂಜೆ ನಾರಾಯಣಗುರು ಸರ್ಕಲ್ ನಿಂದ ಶ್ರೀಕೃಷ್ಣ ಮಠದವರೆಗೂ ಭರ್ಜರಿ ರೋಡ್ ಶೋ ನಡೆಸಿದ್ದಾರೆ.  ಬನ್ನಂಜೆ ನಾರಾಯಣಗುರು ಸರ್ಕಲ್ ನಿಂದ ಜಯಲಕ್ಷ್ಮೀ ಸಿಲ್ಕ್ ಜಂಕ್ಷನ್ ನಗರ ಸಿಟಿ ಬಸ್ ನಿಲ್ದಾಣ ಕಲ್ಸಂಕ ಜಂಕ್ಷನ್ ಮೂಲಕ ಕೃಷ್ಣ ಮಠದ ಪಾರ್ಕಿಂಗ್ ಏರಿಯಾವರೆಗೆ ರೋಡ್ ಶೋ ನಡೆಸುತ್ತಿದ್ದು, ಪ್ರಧಾನಿ ಮೋದಿ ಅವರನ್ನ ಕಣ್ತುಂಬಿಕೊಳ್ಳಲು ರಸ್ತೆ ಇಕ್ಕೆಲಗಳಲ್ಲಿ ಜನಸಾಗರ ಕಿಕ್ಕಿರಿದು ತುಂಬಿದೆ.

ಕೆಲವೇ ಕ್ಷಣಗಳಲ್ಲಿ ಪ್ರಧಾನಿ ಮೋದಿ ಉಡುಪಿ ಶ್ರೀಕೃಷ್ಣಮಠಕ್ಕೆ ಭೇಟಿ ನೀಡಲಿದ್ದಾರೆ. ಮೋದಿ ಆಗಮನ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಭದ್ರತೆ ವಹಿಸಲಾಗಿದೆ.

Key words: Prime Minister, Modi, Udupi, road show