ಬೆಂಗಳೂರು,ನವೆಂಬರ್,27,2025 (www.justkannada.in): ಬೆಳೆ ಹಾನಿ ಹಿನ್ನೆಲೆಯಲ್ಲಿ ರೈತರಿಗೆ ಹೆಚ್ಚವರಿಯಾಗಿ 1,033 ಕೋಟಿ ರೂ. ಬೆಳೆ ಪರಿಹಾರವನ್ನು ಸಿಎಂ ಸಿದ್ದರಾಮಯ್ಯ ಬಿಡುಗಡೆ ಮಾಡಿದ್ದಾರೆ.
ಈ ಕುರಿತು ಇಂದು ಮಾತನಾಡಿದ ಸಿಎಂ ಸಿದ್ದರಾಮಯ್ಯ, ರೈತರಿಗೆ ರಾಜ್ಯ ಸರ್ಕಾರದಿಂದ ಹೆಚ್ಚುವರಿ ಬೆಳೆ ಪರಿಹಾರ ಹಣ ನೀಡುತ್ತಿದ್ದೇವೆ. ರಾಜ್ಯದ 14 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ ಬೆಳೆ ಪರಿಹಾರ ನೀಡಲು ರೈತರು ಆಗ್ರಹಿಸಿದ್ದರು. ನಾನು ಸಹ ಕಲಬುರುಗಿ, ಬೀದರ್, ಯಾದಗಿರಿಗೆ ಹೋಗಿದ್ದೆ ಮೆಕ್ಕೆಜೋಳ, ಕಬ್ಬು, ತೊಗರಿ ಹೆಚ್ಚು ಹಾನಿಯಾಗಿದೆ ಎಂದರು.
ಒಳ್ಳೆಯ ಮಳೆಯಾದರೂ ಬೆಳೆ ಹಾನಿ ನಷ್ಟವಾಗಿದೆ. ಬೆಳೆ ಹಾನಿ ಪರಿಹಾರಕ್ಕೆ ಕೇಂದ್ರಕ್ಕೂ ಮನವಿ ಮಾಡುತ್ತೇವೆ ಕೇಂದ್ರ ಕೂಡ ಪರಿಹಾರ ನೀಡುವ ನಿರೀಕ್ಷೆ ಇದೆ. ಇಂದು 1,033 ಕೋಟಿ ರೂ. ಹೆಚ್ಚುವರಿ ಪರಿಹಾರ ನೀಡುತ್ತಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
Key words: CM Siddaramaiah, releases, Rs 1,033 crore, crop compensation , farmers







