ನ.29 ರಂದು ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ 25 ಬೆಳ್ಳಿ ಸಂಭ್ರಮ, ಕ್ಯಾಲೆಂಡರ್ ಡೈರಿ ಬಿಡುಗಡೆ ಸಮಾರಂಭ

ಮೈಸೂರು,ನವೆಂಬರ್,27,2025 (www.justkannada.in):  ನವೆಂಬರ್ 29 ರಂದು ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ 25 ಬೆಳ್ಳಿ ಸಂಭ್ರಮ, ಲಾಗೈಡ್ ಕ್ಯಾಲೆಂಡರ್ ಮತ್ತು ಡೈರಿ ಬಿಡುಗಡೆ ಸಮಾರಂಭವನ್ನು ಆಯೋಜಿಸಲಾಗಿದೆ.

ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಅಂದು ಬೆಳಿಗ್ಗೆ 10.30ಕ್ಕೆ ಸಮಾರಂಭ ನಡೆಯಲಿದ್ದು ಹೈಕೋರ್ಟ್ ನ್ಯಾಯಾಧೀಶರಾದ ಎಂ.ಜಿ. ಉಮಾ ಅವರು  ಲಾ ಗೈಡ್ ಕ್ಯಾಲೆಂಡರ್ ಹಾಗೂ ಡೈರಿ ಬಿಡುಗಡೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ನಿವೃತ್ತ ಐಜಿಪಿ ಡಿ.ಎನ್ ಮುನಿಕೃಷ್ಣ, ಮಾಜಿ ಸಚಿವ ಹಾಗೂ ಶಾಸಕ ಎ.ಮಂಜು ಆಗಮಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲೆ ಅಪರ ಜಿಲ್ಲಾಧಿಕಾರಿ ಡಾ.ಪಿ. ಶಿವರಾಜ್ ಉಪಸ್ಥಿತರಿರಲಿದ್ದಾರೆ.

ಕಾರ್ಯಕ್ರಮದಲ್ಲಿ ನಿವೃತ್ತ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸಿ.ಜಿ ಹುನಗುಂದ, ಶಶಿಕಲಾ, ಬಸವರಾಜ್ ಎಸ್ ಸಪ್ಪಣ್ಣನವರ್, ರಾಜಾ ಸೋಮಶೇಖರ್,  ಎಸ್.ಎಚ್ ಹೊಸಗೌಂಡರ್, ಅಂಗಡಿ ಹಿರೇಮಠ್, ಜೆಎಸ್ ಎಸ್ ಕಾನೂನು ಕಾಲೇಜಿನ ಕಾರ್ಯ ನಿರ್ವಾಹಕ ಅಧಿಕಾರಿ ಸುರೇಶ್,  ಕಾವೇರಿ ನೀರಾವರಿ ನಿಗಮದ ಎಂ.ಡಿ ಮಹೇಶ್ ಅವರಿಗೆ ಸನ್ಮಾನಿಸಲಾಗುತ್ತದೆ.

ಮಧ್ಯಾಹ್ನ 1 ಗಂಟೆಗೆ  ಕಾನೂನು ಮತ್ತು ಮಾಧ್ಯಮ ಕುರಿತು ಮೊದಲ ಕಾರ್ಯಕ್ರಮ ನಡೆಯಲಿದ್ದು  ನಿವೃತ್ತ ಜಿಲ್ಲಾ ಸತ್ರ ನ್ಯಾಯಾಧೀಶರಾದ ಎಸ್.ಎಚ್ ಹೊಸಗೌಂಡರ್ ಅವರು ಮಾತನಾಡಲಿದ್ದಾರೆ. ಮಧ್ಯಾಹ್ನ2.30ಕ್ಕೆ  ಸೈಬರ್ ಅಪರಾಧ ಮತ್ತು ಡಿಜಿಟಲ್ ಎವಿಡೆನ್ಸ್ ಕುರಿತು ಡಿವೈಎಸ್ ಪಿ ಸಿಐಡಿ(ಸೈಬರ್) ಅವರು ಮಾತನಾಡಲಿದ್ದಾರೆ.

ನಂತರ ಡಾ.ಭಾಷ್ಯಂ ಸ್ವಾಮೀಜಿ ದಿವ್ಯಸಾನಿಧ್ಯದಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು ಮೈಸೂರು ವಿವಿ ಕುಲಪತಿ ಲೋಕನಾಥ್ ಎನ್ ಕೆ ಅಧ್ಯಕ್ಷತೆ ವಹಿಸಲಿದ್ದಾರೆ. ಮೈಸೂರು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಸ್.ಲೋಕೇಶ್ , ಪ್ರಾದೇಶಿಕ ಜಂಟಿ ಸಾರಿಗೆ ಆಯುಕ್ತ ವಸಂತ್ ಈಶ್ವರ್ ಚೌಹಾಣ್  ಉಪಸ್ಥಿತರಿರಲಿದ್ದಾರೆ ಎಂದು ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ ಗೌರವ ಸಂಪಾದಕ ಎಚ್.ಎನ್ ವೆಂಕಟೇಶ್ ತಿಳಿಸಿದ್ದಾರೆ.

Key words: Silver Celebrations, ‘ Law Guide, Calendar, Diary, Release, Mysore