ಮೈಸೂರು,ನವೆಂಬರ್,26,2025 (www.justkannada.in): ಡಿಜಿಟಲ್ ಮಾಧ್ಯಮ ಜಾಹೀರಾತು ನೀತಿಯ ಬಗ್ಗೆ ಮುಂಬರುವ ಅಧಿವೇಶನದಲ್ಲಿ ಗಮನ ಸೆಳೆಯುವೆ ಎಂದು ವಿಧಾನಪರಿಷತ್ ಸದಸ್ಯ ಡಾ.ಕೆ.ಶಿವಕುಮಾರ್ ತಿಳಿಸಿದರು.
ಇಂದು ಮೈಸೂರು ವಿವಿಯ ಸೆಮಿನಾರ್ ಸಭಾಂಗಣದಲ್ಲಿ ಆಯೋಜಿಸಿದ್ದ ‘ಜಸ್ಟ್ ಕನ್ನಡ@15’ ವಿಶೇಷ ಸಂಚಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿಧಾನ ಪರಿಷತ್ ಸದಸ್ಯ ಕೆ. ಶಿವಕುಮಾರ್ ಮಾತನಾಡಿದರು.
ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಜಸ್ಟ್ ಕನ್ನಡ 15 ವರ್ಷಕ್ಕೆ ಕಾಲಿಟ್ಟಿದೆ. ಜಸ್ಟ್ ಕನ್ನಡದ 15 ನೇ ವರ್ಷದ ಡಿಮ್ಯಾಂಡ್ ಏನು ಎಂದರೆ ಜಸ್ಟ್ ಕನ್ನಡ ಕೇವಲ ಕನ್ನಡದಲ್ಲಿ ಮಾತ್ರವಲ್ಲದೇ ಇಂಗ್ಲಿಷ್ ನಲ್ಲೂ ಆನ್ ಲೈನ್ ಪತ್ರಿಕೆ ಹೊರತರಬೇಕು. ಯಾಕೆಂದರೇ ಜಸ್ಟ್ ಕನ್ನಡಗೆ ವಿದೇಶದಲ್ಲಿಯೂ ಓದುಗರ ಸಂಖ್ಯೆ ಹೆಚ್ಚಿದೆ. ಜತೆಗೆ ಬಹುಭಾಷಾ ಮಾಧ್ಯಮ ಈಗ ಹೆಚ್ಚುತ್ತಿದೆ. ಆದ್ದರಿಂದ ಕನ್ನಡದ ಜತೆಗೆ ಇಂಗ್ಲಿಷ್ ನಲ್ಲಿಯೂ ಜಸ್ಟಕನ್ನಡ ಬರಬೇಕು ಎಂದರು.
ಡಿಜಿಟಲ್ ಮಾಧ್ಯಮ ಈಗ ಹೆಚ್ಚು ಬಳಕೆಗೆ ಬರುತ್ತಿದೆ. ಹೀಗಾಗಿ ಡಿಜಿಟಲ್ ಮಾಧ್ಯಮಗಳ ಜಾಹೀರಾತು ನಿಯಮಗಳನ್ನು ಹೊಸದಾಗಿ ರೂಪಿಸಬೇಕು. ಆದರೆ ಅಧಿಕಾರಿಗಳಿಗೆ ಈ ಬಗ್ಗೆ ಸರಿಯಾದ ಅರಿವು ಇಲ್ಲ. ಅದ್ದರಿಂದ ಡಿಜಿಟಲ್ ಮಾಧ್ಯಮಗಳಿಗೆ ಹೊಸ ಜಾಹೀರಾತು ನೀತಿ ಜಾರಿ, ಪತ್ರಕರ್ತರ ಸಮಸ್ಯೆಗಳ ಬಗ್ಗೆ ಮುಂಬರುವ ವಿಧಾನ ಮಂಡಲ ಅಧಿವೇಶನದಲ್ಲಿ ಮುಖ್ಯಮಂತ್ರಿಗಳ ಗಮನ ಸೆಳೆಯುತ್ತೇನೆ ಎಂದು ಕೆ.ಶಿವಕುಮಾರ್ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಜಸ್ಟ್ ಕನ್ನಡ ಸಿಬ್ಬಂದಿಗಳಾದ ಉಪ ಸಂಪಾದಕ ಪ್ರಶಾಂತ, ವಿಡಿಯೋ ಎಡಿಟರ್ ಆಸಿಮ್, ವಿಡಿಯೋ ಜರ್ನಲಿಸ್ಟ್ ಸುದೀಂದ್ರ ಕುಮಾರ್, ಫೋಟೊ ಜರ್ನಲಿಸ್ಟ್ ವಾಟಾಳ್ ಆನಂದ್ ಅವರಿಗೆ ಗಣ್ಯರಿಂದ ಸನ್ಮಾನಿಸಲಾಯಿತು.
Key words: Digital media, advertising policy, MLC, Dr. Shivakumar, Justkannada







