ಫ್ರಾಡ್ ಮೆಸೇಜ್ ಓಪನ್ ಮಾಡುವ ಮುನ್ನ ಎಚ್ಚರ: 1.98 ಲಕ್ಷ ರೂ. ಲಪಟಾಯಿಸಿದ ಸೈಬರ್ ಚೋರರು

ಮೈಸೂರು,ನವೆಂಬರ್,25,2025 (www.justkannada.in): ತಂತ್ರಜ್ಞಾನ ಬೆಳೆದಂತೆ ಇತ್ತೀಚೆಗೆ ಸೈಬರ್ ವಂಚನೆ ಪ್ರಕರಣಗಳು ಹೆಚ್ಚುತ್ತಿದ್ದು ಈ ನಡುವೆ  ವ್ಯಕ್ತಿಯೊಬ್ಬರು ತನಗೆ ಬಂದ ಫ್ರಾಡ್ ಮೆಸೇಜ್ ಓಪನ್ ಮಾಡಿದ ಬೆನ್ನಲ್ಲೆ ಅವರ ಅಕೌಂಟ್ ನಿಂದ ಸೈಬರ್ ಚೋರರು 1.98 ಲಕ್ಷ ರೂ. ಲಪಟಾಯಿಸಿದ್ದಾರೆ.

ಪ್ಯಾಕರ್ಸ್ ಅಂಡ್ ಮೂವರ್ಸ್ ಮಾಲೀಕರಾದ ಚಂದ್ರಶೇಖರ್ ವಂಚನೆಗೊಳಗಾದವರು. ಈ ಸಂಬಂಧ  ಹೆಬ್ಬಾಳ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಚಂದ್ರಶೇಖರ್ ಅವರು ತಮಗೆ ಬಂದ ಫ್ರಾಡ್ ಮೆಸೇಜ್ ಓಪನ್ ಮಾಡಿ ಕೇವಲ 21 ನಿಮಿಷದಲ್ಲಿ ಖದೀಮರು ಕ್ರೆಡಿಟ್ ಕಾರ್ಡ್ ನಿಂದ 1.98 ಲಕ್ಷ ಲಪಟಾಯಿಸಿದ್ದಾರೆ.

ಖಾಸಗಿ ಬ್ಯಾಂಕ್  ನಲ್ಲಿ ಕ್ರೆಡಿಟ್ ಕಾರ್ಡ್ ಹೊಂದಿರುವ ಚಂದ್ರಶೇಖರ್  ಅವರಿಗೆ ಕರೆ ಬಂದಿದ್ದು,  ಬ್ಯಾಂಕ್ ನಿಂದ ಮಾತನಾಡಿದಂತೆ ವಂಚಕರು ಮಾಹಿತಿ ಪಡೆಯಲು ಯತ್ನಿಸಿದ್ದಾರೆ. ಇದೊಂದು ಫ್ರಾಡ್ ಕಾಲ್ ಎಂದು ತಿಳಿದ ಚಂದ್ರಶೇಖರ್ ಕರೆ ಸ್ವೀಕರಿಸಿಲ್ಲ. ನಂತರ ತಮ್ಮ ಅಕೌಂಟ್ ಗೆ 26 ಸಾವಿರ ಕ್ರೆಡಿಟ್ ಆಗಿರುವುದಾಗಿ ಮೆಸೇಜ್ ಬಂದಿದೆ.

ಮೆಸೇಜ್ ಓಪನ್ ಮಾಡಿದ ಕೇವಲ 21 ನಿಮಿಷದಲ್ಲಿ ವಂಚಕರು ಹಂತಹಂತವಾಗಿ 1.98 ಲಕ್ಷ  ರೂ ಗಳನ್ನ ದೋಚಿದ್ದಾರೆ. ಕೆಲವೇ ನಿಮಿಷಗಳಲ್ಲಿ ಹಲವು ಓಟಿಪಿ ಗಳು ಬಂದ ಹಿನ್ನಲೆ ಕೂಡಲೇ ತಮ್ಮ ಖಾತೆ ಬ್ಲಾಕ್ ಮಾಡಿಸಿ 1930 ಕ್ಕೆ ಕರೆ ಮಾಡಿ ದೂರು ದಾಖಲಿಸಿದ್ದು ಹೆಬ್ಬಾಳ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: open, fraud message, 1.98 lakh rupees, lost, Mysore