ಪಕ್ಷ ವೀಕ್ ಮಾಡಲು ಬಿಡಲ್ಲ: ನನ್ನನ್ನು ಸಿಎಂ ಮಾಡಿ ಅಂತಾ ಕೇಳಿಲ್ಲ- ಡಿಸಿಎಂ ಡಿಕೆ ಶಿವಕುಮಾರ್

ಕನಕಪುರ,ನವೆಂಬರ್,25,2025 (www.justkannada.in):  ನಾನು ಪಕ್ಷವನ್ನ ವೀಕ್ ಮಾಡಲು ಬಿಡಲ್ಲ. ನನ್ನನ್ನು ಸಿಎಂ ಮಾಡಿ ಎಂದು ನಾನು ಕೇಳಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್,  ಸಿಎಂ ಸ್ಥಾನದ ಹಸ್ತಾಂತರ 5ರಿಂದ 6 ಜನರ ಗುಟ್ಟಿನ ವ್ಯಾಪಾರ. ಈ ಬಗ್ಗೆ ನಾನು ಬಹಿರಂಗವಾಗಿ ಮಾತನಾಡಲ್ಲ. ನನ್ನನ್ನ ಸಿಎಂ ಮಾಡಿ ಅಂತಾ ನಾನು ಕೇಳಿಲ್ಲ ಎಂದರು.

ಪಕ್ಷ ವೀಕ್ ಮಾಡಲು ಬಿಡಲ್ಲ. ಪಕ್ಷ ಇದ್ದರೆ ನಾವೆಲ್ಲ.  ಪಕ್ಷಕ್ಕೆ ಮುಜುಗರ ತರುವ ಕೆಲಸ ಮಾಡಲ್ಲ. ಸಿದ್ದರಾಮಯ್ಯ ಬಜೆಟ್ ಮಂಡಿಸ್ತೇನೆ ಎಂದಿದ್ದಾರೆ.  ಮಂಡಿಸಲಿ ವಿಪಕ್ಷ ನಾಯಕರಾಗಿಯೂ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷಕ್ಕಾಗಿ ಸಿದ್ದರಾಮಯ್ಯ ಕೂಡ ದುಡಿದಿದ್ದಾರೆ. ಎಲ್ಲಿ ಶ್ರಮವಿದೆಯೋ ಅಲ್ಲಿ ಫಲವಿದೆ.  ರಾಯರೆಡ್ಡಿ, ಡಿವಿಎಸ್  ಹೇಳಿಕೆಗೆ ಪ್ರತಿಕ್ರಿಯಿಸಲ್ಲ. ನಾನು ಅವರ ವಕ್ತಾರರಲ್ಲ ಎಂದು ಡಿಕೆ ಶಿವಕುಮಾರ್ ತಿರುಗೇಟು ನೀಡಿದರು.

Key words: Congress, Power sharing, CM, Siddaramaiah, DCM, DK Shivakumar