ಅಯೋಧ್ಯೆ,ನವೆಂಬರ್,25,2025 (www.justkannada.in): ಇಡೀ ವಿಶ್ವ ಇಂದು ರಾಮಮಯವಾಗಿದೆ. ಅಂದಿನ ಸಂಕಲ್ಪ ಇಂದು ಸಿದ್ಧಿಯಾಗಿದೆ. 2047ರ ವೇಳೆಗೆ ವಿಕಸಿತ ಭಾರತ ನಿರ್ಮಾಣ ಪೂರ್ಣಗೊಳ್ಳಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ನುಡಿದರು.
ಅಯೋಧ್ಯೆಯ ರಾಮ ಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಂಡ ಹಿನ್ನೆಲೆಯಲ್ಲಿ ಇಂದು ರಾಮಮಂದಿರದ ಮೇಲೆ ಧರ್ಮಧ್ವಜಾರೋಹಣ ಕಾರ್ಯ ನೆರವೇರಿಸಿ ಮಾತನಾಡಿದ ಪ್ರಧಾನಿ ಮೋದಿ, ಇಂದು ರಾಮಭಕ್ತರಿಗೆ ಬಹಳಷ್ಟು ಆನಂದಾಗಿದೆ ಅಂದಿನ ಸಂಕಲ್ಪ ಇಂದು ಸಿದ್ಧಿಯಾಗಿದೆ 500 ವರ್ಷಗಳ ಯಜ್ಞ ಇಂದು ಶಾಂತಗೊಂಡಿದೆ. ಭವ್ಯವಾದ ಮಂದಿರದಲ್ಲಿ ಶ್ರೀರಾಮ ವಿರಾಜಮಾನನಾಗಿದ್ದಾರೆ ಕೇಸರಿ ಧ್ವಜ ಕನಸುಗಳ ಸಾಕಾರದ ಸ್ವರೂಪ. ಶತಮಾನಗಳ ವೇದನೆಗೆ ಇಂದು ಪೂರ್ಣ ವಿರಾಮ ಸಿಕ್ಕಿದೆ. ಶ್ರೀಧರ್ಮ ಧ್ವಜ ಏಕರೂಪದ ಪ್ರತೀಕವಾಗಿದೆ. ಧರ್ಮಧ್ವಜ ನಮ್ಮ ಸಂತರ ಸಾಧನೆಯ ಪ್ರತೀಕವಾಗಿದೆ. ಧರ್ಮಧ್ವಜ ಶ್ರೀರಾಮ ಆದರ್ಶಗಳ ಉದ್ಘೋಷವಾಗಿದೆ ಇದು ಸತ್ಯಕ್ಕೆ ಗೆಲವು ಸಿಗುತ್ತೆ ಎಂಬ ಉದ್ಘೋಷ ಸಾರುತ್ತದೆ . ನಾವು ರಾಮನ ಆದರ್ಶಗಳನ್ನ ಅರ್ಥ ಮಾಡಿಕೊಳ್ಳಬೇಕಿದೆ ಎಂದರು.
ಮರ್ಯಾದ ಪುರುಷೋತ್ತಮರಾಗಿ ರಾಮ ಅಯೋಧ್ಯೆಗೆ ಬಂದರು. ಶ್ರೀರಾಮನ ವ್ಯಕ್ತಿತ್ವ ನಾವೆಲ್ಲರೂ ತಿಳಿದುಕೊಳ್ಳಬೇಕು. ಶ್ರೀರಾಮಮಂದಿರ ಮೇಲೆ ಧರ್ಮಧ್ವಜ ಸ್ಥಾಪಿಸಲಾಗಿದೆ. ಧರ್ಮಧ್ವಜ ಸತ್ಯದ ಪ್ರತೀಕವಾಗಿದೆ. ವಿಶ್ವದಲ್ಲಿ ಭಾರತ ಪ್ರಜಾಪ್ರಭುತ್ವದ ಜನಕ. ಭಾರತ ಪ್ರಜಾಪ್ರಭತ್ವದ ತಾಯಿ. ಮೆಕಾಲೆಯು ಗುಲಾಮಗಿರಿಯ ಬೀಜ ಬಿತ್ತಿದ್ದ. ಈಗ ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆ ತರಲಾಗಿದ್ದು ಭಾರತ ಗುಲಾಮಗಿರಿಯಿಂದ ಹೊರಬಂದಿದೆ. 2047ರವೇಳೆಗೆ ವಿಕಸಿತ ಭಾರತ ನಿರ್ಮಾಣ ಪೂರ್ಣಗೊಳ್ಳಲಿದೆ. ಪ್ರತಿ ಸಮುದಾಯದ ಅಭಿವೃದ್ದಿ ಪರ ಕೇಂದ್ರ ಕೆಲಸ ಮಾಡುತ್ತಿದೆ ಎಂದರು.
Key words: Heralding, ideals ,Dharmadhwaja, Shri Ram, PM, Modi







