ಕಾಂಗ್ರೆಸ್‌ ನಲ್ಲಿ ನಾನು ಇನ್ನೂ ಒಂದು ವರ್ಷದ ಮಗು: ಶಾಸಕ ಸಿ.ಪಿ  ಯೋಗೇಶ್ವರ್

ರಾಮನಗರ,ನವೆಂಬರ್,24,2025 (www.justkannada.in): ನನಗೆ ಯಾವ ಬಣವೂ ಇಲ್ಲ. ನಾಯಕತ್ವ ಬದಲಾವಣೆ ಕುರಿತು ಚರ್ಚೆ ಗೊತ್ತಿಲ್ಲ. ಕಾಂಗ್ರೆಸ್‌ ನಲ್ಲಿ ನಾನು ಇನ್ನೂ ಒಂದು ವರ್ಷದ ಮಗು ಎಂದು ಶಾಸಕ ಸಿ.ಪಿ ಯೋಗೇಶ್ವರ್ ನುಡಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಸಿ.ಪಿ ಯೋಗೇಶ್ವರ್,  ‘ನಾನು ಒಂದು ವರ್ಷದ ಹಿಂದೆ ಕಾಂಗ್ರೆಸ್‌ ಸೇರಿ ಶಾಸಕನಾಗಿರುವವನು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಇಬ್ಬರೂ ನಮ್ಮ ನಾಯಕರು. ನಾಯಕತ್ವ ಬದಲಾವಣೆ ವಿಚಾರ ಹೈಕಮಾಂಡ್ ಗೆ ಬಿಟ್ಟಿದ್ದು. ಈ ಬಗ್ಗೆ ನಾಯಕರು ಅಭಿಪ್ರಾಯ ಕೇಳಿದರೇ ತಿಳಿಸುತ್ತೇನೆ ಎಂದರು.

ಡಿಸಿಎಂ ಡಿಕೆ ಶಿವಕುಮಾರ್ ಭೇಟಿ ಕುರಿತು ಪ್ರತಿಕ್ರಿಯಿಸಿದ ಶಾಸಕ ಸಿ.ಪಿ ಯೋಗೇಶ್ವರ್,  ನೀರಾವರಿಗೆ ಸಂಬಂಧಿಸಿದ ಕೆಲಸಗಳ ಬಗ್ಗೆ  ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ಚರ್ಚಿಸಿದ್ದೇನೆ. ಅಭಿವೃದ್ದಿ ದೃಷ್ಟಿಯಿಂದ ಇಬ್ಬರ ಬಳಿಯೂ ಮಾತನಾಡುತ್ತೇನೆಯೇ ಹೊರತು, ರಾಜಕೀಯ ವಿಚಾರವನ್ನ ಚರ್ಚಿಸಿಲ್ಲ ಎಂದು ತಿಳಿಸಿದರು.

Key words: Leadership change, I am, one-year-old child, Congress, MLA, C.P. Yogeshwar