ಶಾಸಕರ ನಂಬರ್ ಗೇಮ್ ನಲ್ಲಿ ಡಿಕೆಶಿ ವೀಕ್- ಶಾಸಕ ರಮೇಶ್ ಜಾರಕಿಹೊಳಿ

ಬೆಳಗಾವಿ,ನವೆಂಬರ್,24,2025 (www.justkannada.in):  ಕಾಂಗ್ರೆಸ್ ನಲ್ಲಿ ಅಧಿಕಾರ ಹಂಚಿಕೆ ವಿಚಾರದ ಬಿಸಿ ಜೋರಾಗಿದ್ದು ಈ ಬಗ್ಗೆ ಉಂಟಾಗಿರುವ ಗೊಂದಲಕ್ಕೆ ಹೈಕಮಾಂಡ್ ತೆರೆ ಎಳೆಯಬೇಕಿದೆ.  ಈ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿರುವ ರಮೇಶ್ ಜಾರಕಿಹೊಳಿ, ಶಾಸಕರ ನಂಬರ್ ಗೇಮ್ ನಲ್ಲಿ ಡಿಕೆ ಶಿವಕುಮಾರ್ ವೀಕ್. ರಾಜ್ಯದಲ್ಲಿ ಬಿಜೆಪಿ ವಿಪಕ್ಷ ವಾಗಿ ಕೆಲಸ ಮಾಡುತ್ತಿದೆ.   ಮುಖ್ಯಮಂತ್ರಿ ಬದಲಾವಣೆ ನಮ್ಮ ಡ್ಯೂಟಿ ಅಲ್ಲ. ಅದು ಕಾಂಗ್ರೆಸ್ ಆಂತರಿಕ ಸಮಸ್ಯೆ.  ಕಾಂಗ್ರೆಸ್ ನವರು ಯಾರನ್ನಾದೂ ಸಿಎಂ ಮಾಡಿಕೊಳ್ಳಲಿ.  ಸಿಎಂ ಬದಲಾವಣೆಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದರು.

ಕಾಂಗ್ರೆಸ್ ನಲ್ಲಿದ್ದಾಗ ಸತೀಶ್  ಸಿಎಂ ಆಗಲಿ ಎಂದಿದ್ದೆ. ಈಗ ಬಿಜೆಪಿಯಲ್ಲಿದ್ದೇನೆ.  ಅದನ್ನು ಇವತ್ತು ಕೇಳುವುದು ಸರಿಯಲ್ಲ ಎಂದು ರಮೇಶ್ ಜಾರಕಿಹೊಳಿ ಹೇಳಿದರು.

Key words: Power sharing, Congress,  numbers game, MLA, Ramesh Jarkiholi