ಮುಂಬೈ, ನವೆಂಬರ್,24,2025 (www.justkannada.in) : ‘ಬಾಲಿವುಡ್ ಹೀ ಮ್ಯಾನ್’ ಎಂದೇ ಖ್ಯಾತಿಯಾಗಿದ್ದ ಬಾಲಿವುಡ್ ಹಿರಿಯ ನಟ ಧರ್ಮೇಂದ್ರ (89) ನಿಧನರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಧರ್ಮೇಂದ್ರ ಅವರು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿತ್ತು. ನಂತರ ಅವರನ್ನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿತ್ತು. ಆದರೆ ಇಂದು ನಟ ಧರ್ಮೇಂದ್ರ ನಿಧನರಾಗಿದ್ದಾರೆ ಎನ್ನಲಾಗಿದೆ.
ಹಿರಿಯ ನಟ ಧರ್ಮೇಂದ್ರ ನಿಧನಕ್ಕೆ ಹಲವು ನಟರು ಕಂಬನಿ ಮಿಡಿದಿದ್ದಾರೆ. ಧರ್ಮೇಂದ್ರ ಅವರು ಶೋಲೆ, ಚುಪ್ಕೆ ಚುಪ್ಕೆ, ಯಮ್ಲಾ ಪಗ್ಲಾ ದೀವಾನಾ, ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಮುಂತಾದ ಅನೇಕ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ಧರ್ಮೆಂದ್ರ ಅವರು 2012 ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ಪಡೆದಿದ್ದಾರೆ.
Key words: Veteran Bollywood actor, Dharmendra, passes away







