ಯಾದಗಿರಿ,ನವೆಂಬರ್,24,2025 (www.justkannada.in): ಅಧಿಕಾರ ಹಂಚಿಕೆ , ನಾಯಕತ್ವ ಬದಲಾವಣೆ ಸಂಬಂಧ ಡಿಸಿಎಂ ಡಿಕೆ ಶಿವಕುಮಾರ್ ಬಣ ದೆಹಲಿಗೆ ತೆರಳಿದ್ದಾರೆಂಬ ಸುದ್ದಿ ಹಿನ್ನೆಲೆಯಲ್ಲಿ ಈ ಕುರಿತು ಪ್ರತಿಕ್ರಿಯಿಸಿರುವ ಇಂಧನ ಸಚಿವ ಕೆ.ಜೆ ಜಾರ್ಜ್, ನಮ್ಮಲ್ಲಿ ಯಾವುದೇ ಬಣವಿಲ್ಲ ನಮ್ಮದು ಒಂದು ಕುಟುಂಬ ಎಂದಿದ್ದಾರೆ.
ಯಾದಗಿರಿಯಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಕೆ.ಜೆ ಜಾರ್ಜ್, ನಮ್ಮಲ್ಲಿ ಯಾವುದೇ ಬಣ ಇಲ್ಲ. ಎಲ್ಲರೂ ಕಾಂಗ್ರೆಸ್ ಶಾಸಕರು, ನಮ್ಮದು ಒಂದು ಕುಟುಂಬ. ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರು ಅದಕ್ಕೆ ಸಿಎಂ ಭೇಟಿಯಾಗಿದ್ದಾರೆ. ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಡಿಕೆ ಶಿವಕುಮಾರ್ ಅವರೇ ಹೇಳಿದ್ದಾರೆ ಎಂದು ಹೇಳಿದರು.
Key words: congress, no faction, one family, Minister, KJ George







